Udyogini Loan Scheme: ಮಹಿಳೆಯರಿಗೆ ಬಂಪರ್ ಸಿಹಿ ಸುದ್ದಿ; ₹3 ಲಕ್ಷ ಸಾಲ ಮತ್ತು 50%ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ!

Udyogini Loan Scheme: ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ತಿಳಿಸುವ ಪ್ರಮುಖ ವಿಷಯವೇನೆಂದರೆ, ಈ ಯೋಜನೆಯನ್ನು ನಮ್ಮ ಕರ್ನಾಟಕ ರಾಜ್ಯ ಸರ್ಕಾರವು 2015-16ನೇ ವರ್ಷದಲ್ಲಿ ಆರಂಭ ಮಾಡಿದೆ ಹಾಗಾದರೆ ಯಾವುದು ಈ ಯೋಜನೆ? ಮತ್ತು ಈ ಯೋಜನೆ ಅಡಿಯಲ್ಲಿ ಯಾವೆಲ್ಲ ಲಾಭಗಳಿವೆ? ಈ ಯೋಜನೆಯ ಪ್ರಮುಖ ಉದ್ದೇಶವೇನು? ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

ಈ ಯೋಜನೆಯ ಹೆಸರು “ಉದ್ಯೋಗಿನಿ ಯೋಜನೆ” ಈ ಉದ್ಯೋಗಿನಿ ಸಾಲ ಯೋಜನೆಯ (Udyogini Loan Scheme) ಅಡಿಯಲ್ಲಿ ಮೂರು ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ಹಾಗೂ ಅದರಲ್ಲಿ 50% ರಷ್ಟು ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ. ಹಾಗಾದರೆ ಈ ಯೋಜನೆಯ ಮೂಲಕ 1,50,000 ಹಣವನ್ನು ಉಚಿತವಾಗಿ ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯ ಲಾಭ: 

ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಸಾಮಾನ್ಯ ವರ್ಗದ ಮಹಿಳೆಯರಿಗೆ 30% ರಷ್ಟು ಸಬ್ಸಿಡಿ ನೀಡಲಾಗುತ್ತದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 50% ರಷ್ಟು ಸಬ್ಸಿಡಿಯನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ. 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ನೀಡಿ ಮಹಿಳೆಯರಿಗೆ 30 ರಿಂದ 50 ಪ್ರತಿಶತದವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಇದು ಈ ಯೋಜನೆಯ ಮುಖ್ಯ ಲಾಭವಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು: 

  1. ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. 
  2. ಉದ್ಯೋಗಿನಿ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯ ವಯಸ್ಸು 18 ವರ್ಷ ಮೇಲ್ಪಟ್ಟು 55 ವರ್ಷ ಮೀರಿರಬಾರದು. 
  3. ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 1,50,000 ಕ್ಕಿಂತ ಕಡಿಮೆ ಇರಬೇಕು.
  4. ವಿಧವೆ ಮತ್ತು ಅಂಗವಿಕಲ ಮಹಿಳೆಯರಿಗೆ ಆದಾಯದ ಮಿತಿ ಇರುವುದಿಲ್ಲ. 
  5. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯು ಯಾವುದೇ ರೀತಿಯ ಸ್ವಯಂ ಉದ್ಯೋಗ ಸಾಲವನ್ನು ಕೇಂದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರದಿಂದ ಪಡೆದಿರಬಾರದು ಎಂದು ತಿಳಿಸಲಾಗಿದೆ. 

ಬೇಕಾಗುವ ದಾಖಲೆಗಳು: 

  • ಆಧಾರ್ ಕಾರ್ಡ್ 
  • ಜನನ ಪ್ರಮಾಣ ಪತ್ರ 
  • ರೇಷನ್ ಕಾರ್ಡ್ 
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ 
  • ಮೊಬೈಲ್ ನಂಬರ್ 
  • ವಿಳಾಸದ ಪುರಾವೆ 
  • ಬ್ಯಾಂಕ್ ಪಾಸ್ ಬುಕ್ ವಿವರಗಳು 

ಅರ್ಜಿ ಸಲ್ಲಿಸುವ ವಿಧಾನ: 

ಸ್ನೇಹಿತರೆ, ನೀವೇನಾದರೂ ಈ ಉದ್ಯೋಗಿನಿ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಜಾಲತಾಣದ ಲಿಂಕನ್ನು ಈ ಕೆಳಗಡೆ ನೀಡಲಾಗಿರುತ್ತದೆ ಹಾಗೂ ಅರ್ಜಿ ಸಲ್ಲಿಸಲು ನಿಮಗೆ ತಿಳಿಯದಿದ್ದರೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಉದ್ಯೋಗಿನಿ ಸಾಲ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್: ಅಪ್ಲೈ ಮಾಡಿ.!

ಮೇಲೆ ಕೊಟ್ಟಿರುವ ಜಾಲತಾಣವನ್ನು ಬಳಸಿಕೊಂಡು ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ ಮೂರು ಲಕ್ಷದವರೆಗೆ ಉದ್ಯೋಗಕ್ಕಾಗಿ ಸಾಲವನ್ನು ಪಡೆಯಬಹುದಾಗಿರುತ್ತದೆ.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!