Aditya Birla Scholarship: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ವಿದ್ಯಾರ್ಥಿಗಳಿಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಪಿಯುಸಿ ಡಿಪ್ಲೋಮಾ ಐಟಿಐ ನಂತರದ ಯಾವುದೇ ರೀತಿಯ ಮೂರು ವರ್ಷದ ಅಥವಾ ನಾಲ್ಕು ವರ್ಷದ ಪ್ರೊಫೆಷನಲ್ ಡಿಗ್ರಿ ಕೋರ್ಸುಗಳಿಗೆ ನೀವೇನಾದರೂ ಸೇರಿದ್ದರೆ, ಶಿಕ್ಷಣದ ವೆಚ್ಚ ಬರಿಸಲು ಆರ್ಥಿಕ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ, ಅದರ ಚಿಂತೆಯನ್ನು ಬಿಡಿ ಎಂದು ಹೇಳಬಹುದು.
ನೀವು ಈಗಲೇ ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ಶಿಪ್‌ಗೆ ಅರ್ಜಿಯನ್ನು ಸಲ್ಲಿಸಿ 48000 ದಿಂದ 60 ಸಾವಿರದವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಯಾವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಮತ್ತು ಬೇಕಾಗುವ ದಾಖಲೆಗಳು ಯಾವುವು? ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ನಿಮ್ಮ ಪ್ರಶ್ನೆಗಳಿಗೆ ಸಂಪೂರ್ಣವಾಗಿ ಉತ್ತರಿಸಲಾಗಿರುತ್ತದೆ ನೋಡಿ.
ಹೌದು ಸ್ನೇಹಿತರೆ, ಇತ್ತೀಚಿಗೆ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಯಾವುದೇ ರೀತಿಯ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತದೆ. ಈ ಲೇಖನದಲ್ಲಿ 60 ಸಾವಿರ ವರೆಗೆ ಆದಿತ್ಯ ಬಿರ್ಲಾ ಸ್ಕಾಲರ್ಶಿಪ್ ಪಡೆಯಲು ಯಾರು ಅರ್ಹರು ಎಂಬುವುದನ್ನು ತಿಳಿದುಕೊಳ್ಳಿ.
ಈ ವಿದ್ಯಾರ್ಥಿ ವೇತನವನ್ನು ಪಡೆಯಲು 3 ವರ್ಷದ ಅಥವಾ 4 ವರ್ಷದ ಪ್ರೊಫೆಷನಲ್ ಪದವಿ ಕೋರ್ಸುಗಳನ್ನು ಓದುತ್ತಿರುವವರು ಅರ್ಜಿ ಸಲ್ಲಿಸಿ 60 ಸಾವಿರದವರೆಗಿನ ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ಶಿಪ್ ಅನ್ನು ಪಡೆಯಬಹುದಾಗಿರುತ್ತದೆ.
ಅರ್ಹತೆಗಳು:
- ವಿದ್ಯಾರ್ಥಿಗಳು ತಮ್ಮ ಹಿಂದಿನ ತರಗತಿಯಲ್ಲಿ 60% ನಷ್ಟು ಅಂಕಗಳನ್ನು ಗಳಿಸಿರಬೇಕು.
- ಭಾರತದ ಪ್ರಜೆಯಾಗಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಈ ವಿದ್ಯಾರ್ಥಿ ವೇತನದಲ್ಲಿ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಲಾಗಿರುತ್ತದೆ.
- ಅರ್ಜಿ ಸಲ್ಲಿಕೆ ಕೊನೆ ದಿನಾಂಕ : 15/10/2024
ಮೇಲೆ ನೀಡಿರುವ ಅರ್ಹತೆಗಳನ್ನು ಗಮನದಲ್ಲಿಟ್ಟುಕೊಂಡು ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ಈ ಕೆಳಗಡೆ ತಿಳಿದುಕೊಳ್ಳಬಹುದಾಗಿದೆ.
ಬೇಕಾಗುವ ದಾಖಲೆಗಳು:
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಹಿಂದಿನ ತರಗತಿಯ ಅಂಕಪಟ್ಟಿ
- ಬ್ಯಾಂಕ್ ಪಾಸ್ ಬುಕ್ ವಿವರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಪಾಸ್ಪೋರ್ಟ್ ಅಳ್ತೆಯ ಭಾವಚಿತ್ರ
- ಕಾಲೇಜು ಪ್ರವೇಶ ಪ್ರಮಾಣ ಪತ್ರ
- ಸಹಿ
ಈ ಮೇಲಿನ ದಾಖಲೆಗಳನ್ನು ತೆಗೆದುಕೊಂಡು ನೀವು ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಸ್ಕಾಲರ್ ಶಿಪ್ ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿರುತ್ತದೆ ನೋಡಿ.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ನೀವು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
- ನಂತರ ಅಧಿಕೃತ ಜಾಲತಾಣದ ಮುಖಪುಟ ತೆರೆಯುತ್ತದೆ.
- ನೀವು ಇಲ್ಲಿ ಆದಿತ್ಯ ಬಿರ್ಯ ಕ್ಯಾಪಿಟಲ್ ಸ್ಕಾಲರ್ಶಿಪ್ ಎಂಬ ಆಯ್ಕೆಯ ಮೇಲೆ ಮುಂದೆ ಸಾಗಿರಿ.
- ನೀವು ಇಲ್ಲಿ ಅರ್ಹತೆ ಮತ್ತು ಸೌಲಭ್ಯದ ಕುರಿತು ಸಂಪೂರ್ಣ ವಿವರವನ್ನು ಗಮನದಲ್ಲಿಟ್ಟುಕೊಂಡು ಓದಿಕೊಳ್ಳಿ.
- ನಂತರ ಅಪ್ಲೈ ನಾವು ಎಂಬ ಆಪ್ಷನ್ ಕಾಣಿಸುತ್ತದೆ ಅದರ ಮೂಲಕ ನೀವು ಮುಂದುವರೆದು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
- ಕೇಳಲಾಗುವ ಎಲ್ಲಾ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ಸರಿಯಾಗಿ ನೀಡಿ ಅರ್ಜಿ ಸಲ್ಲಿಸಿ.