Canara Bank Loan : ನಮಸ್ಕಾರ ಕರ್ನಾಟಕದ ಜನತೆಗೆ, ಈ ಲೇಖನದ ಮೂಲಕ ಕೆನರಾ ಬ್ಯಾಂಕಿನಲ್ಲಿ ಖಾತೆ ಹೊಂದಿರುವಂತಹ ಗ್ರಾಹಕರು ಕಡಿಮೆ ಬಡ್ಡಿ ದರದಲ್ಲಿ 10,000 ದಿಂದ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಅಥವಾ ಪರ್ಸನಲ್ ಲೋನ್ ಅನ್ನು ಪಡೆಯುವುದು ಹೇಗೆ? ಎಂಬ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಸಂಪೂರ್ಣವಾದ ಮಾಹಿತಿ ಬೇಕಿದ್ದರೆ ಲೇಖನವನ್ನು ಕೊನೆಯವರೆಗೂ ಓದಿ.
ಕೆನರಾ ಬ್ಯಾಂಕ್ ಪರ್ಸನಲ್ ಲೋನ್:
ತುರ್ತು ಸಮಯಗಳಲ್ಲಿ ಹಣದ ಅವಶ್ಯಕತೆ ತುಂಬಾ ಇರುವಂತ ಜನರು ಸಾಕಷ್ಟು ಇದ್ದಾರೆ ಅಂತವರಿಗೆ ಹೆಚ್ಚಿನ ಮಟ್ಟದಲ್ಲಿ ಬ್ಯಾಂಕಿಗೆ ಅಲೆದಾಡುವ ತೊಂದರೆ ಇಲ್ಲದೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಕೆನರಾ ಬ್ಯಾಂಕ್ ಮೂಲಕ ನೀಡಲಾಗುತ್ತದೆ. ಈ ಸಾಲಕ್ಕೆ ಬೇಕಾಗುವ ದಾಖಲೆಗಳು ಮತ್ತು ಇರಬೇಕಾದ ಅರ್ಹತೆಗಳ ಬಗ್ಗೆ ಈ ಕೆಳಗೆ ತಿಳಿದುಕೊಳ್ಳಿ.
ಪರ್ಸನಲ್ ಲೋನ್ ವಿವರಗಳು:
ಸಾಲ ನೀಡುವ ಸಂಸ್ಥೆ | ಕೆನರಾ ಬ್ಯಾಂಕ್ |
ಸಾಲದ ಮೊತ್ತ | 10,000 ದಿಂದ 10 ಲಕ್ಷ ರೂಪಾಯಿ |
ಬಡ್ಡಿದರ | 8.5% ನಿಂದ 33% ವರೆಗೆ (ವಾರ್ಷಿಕವಾಗಿ) |
ಸಾಲದ ರೂಪ | ವೈಯಕ್ತಿಕ ಸಾಲ |
ಸಂಸ್ಕರಣ ಶುಲ್ಕ | ಸಾಲದ ಮೊತ್ತದ ಮೇಲೆ ಅವಲಂಬಿಸಿರುತ್ತದೆ. |
ವಿಶೇಷ ಸೂಚನೆ: ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬೇಕಾಗುವಂತಹ ಕೆಲವು ಅವಶ್ಯಕತೆಗಳನ್ನು ಈ ಮೇಲೆ ನೀಡಿರಲಾಗಿರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಬೇಟಿ ನೀಡಿ ಇನ್ನಷ್ಟು ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿರುತ್ತದೆ.
ನೀವೇನಾದರೂ ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು ಸಾಮಾನ್ಯವಾಗಿ 750ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರನ್ನು ಉತ್ತಮ ಎಂದು ಪರಿಗಣಿಸಲಾಗಿರುತ್ತದೆ. ಕನಿಷ್ಠಪಕ್ಷ ನೀವು 650 ಕಿಂತ ಹೆಚ್ಚಿನ ಸಿಬಿಲ್ ಸ್ಕೋರನ್ನ ಹೊಂದಿದ್ದರೆ ಉತ್ತಮ.
ನೀವು ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬೇಕೆಂದು ಬಯಸಿದರೆ ಯಾವುದಾದರೂ ಆದಾಯದ ಮೂಲವನ್ನು ಹೊಂದಿರುವುದು ಅಗತ್ಯವಾಗಿದೆ. ಅಥವಾ ನಿಮ್ಮ ಉದ್ಯೋಗದ ಪುರಾವೆಗಳನ್ನು ಒದಗಿಸುವ ಮೂಲಕ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ತಿಂಗಳಿಗೆ ಕನಿಷ್ಠ 15000 ಆದಾಯವನ್ನು ಹೊಂದಿರುವಂತಹ ಯಾವುದಾದರೂ ಉದ್ಯೋಗ ಅಥವಾ ವ್ಯಾಪಾರ ಏನೇ ಇರಲಿ ಅದಕ್ಕೆ ಸಂಬಂಧಿಸಿದಂತಹ ದಾಖಲೆಗಳನ್ನು ಒದಗಿಸಿದ ಅಂತವರಿಗೆ ಸಾಲವನ್ನು ನೀಡಲಾಗುವುದು.
ನೀವು ಕೆನರಾ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಬೇಕೆಂದು ಬಯಸಿದರೆ ಅಗತ್ಯವಿರುವ ಎಲ್ಲ ನಿಜವಾದ ದಾಖಲೆಗಳನ್ನು ನೀಡಬೇಕಾಗುತ್ತದೆ. ನಿಮ್ಮ ಬಳಿ ಇರುವಂತಹ ವೈಯಕ್ತಿಕ ದಾಖಲೆಗಳನ್ನು ಬಳಸಿಕೊಂಡು ಸಾಲ ಪಡೆಯುವ ಅವಕಾಶವಿರುತ್ತದೆ.
ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಆದಾಯ ಪ್ರಮಾಣ ಪತ್ರ
- ಉದ್ಯೋಗ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ನಂಬರ್
- 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
ಸಾಲ ಪಡೆಯುವುದು ಹೇಗೆ?
ನೀವೇನಾದರೂ ಕೆನರಾ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡುವುದು ಉತ್ತಮ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕೂಡ ಅವಕಾಶವಿರುತ್ತದೆ. ಆದರೆ ಕೆನರಾ ಬ್ಯಾಂಕಿಗೆ ಆಫ್ಲೈನ್ ಮೂಲಕ ನೀವು ಭೇಟಿ ನೀಡಿ ಸಾಲಕ್ಕೆ ಅರ್ಜಿ ಸಲ್ಲಿಸಿ ಪಡೆಯುವುದು ಸೂಕ್ತ ಎಂದು ಹೇಳಬಹುದು.
ನೀವು ಕೆನರಾ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಬಯಸಿದರೆ ಈ ಬ್ಯಾಂಕಿನ ಶರತ್ತು ಮತ್ತು ನಿಯಮಗಳು ಸರಿಯಾಗಿ ಓದಿಕೊಂಡ ನಂತರ ನೀವು ಅದಕ್ಕೆ ಒಪ್ಪಿಗೆಗೆ ಸಹಿ ಹಾಕಿದ ನಂತರ ಸಾಲವನ್ನು ಪಡೆದುಕೊಳ್ಳಿ ಇನ್ನಷ್ಟು ಹೆಚ್ಚಿನ ನಿರ್ದಿಷ್ಟ ಮಾಹಿತಿ ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿದರೆ ದೊರಕುತ್ತದೆ.