Google Pay Loans: ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಗೂಗಲ್ ಒಂದು ಲಕ್ಷದವರೆಗಿನ ವಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಅವಕಾಶವನ್ನು ನೀಡುತ್ತಿದೆ. ಹಾಗೂ ಬ್ಯಾಂಕಿಗೆ ನೀವು ಅಲೆದಾಟವಿಲ್ಲದೆ ಸುಲಭವಾಗಿ ಸಾಲದ ಹಣವನ್ನು ಪಡೆದುಕೊಳ್ಳಬಹುದು. ಗೂಗಲ್ ಪೇ ನಲ್ಲಿ ಸಾಲವನ್ನು ಯಾವ ರೀತಿ ಪಡೆದುಕೊಳ್ಳಬೇಕು? ಎಂಬುದರ ಬಗ್ಗೆ ಸಂಪೂರ್ಣವಾದ ವಿವರವನ್ನು ನೀಡಲಾಗಿರುತ್ತದೆ ಲೇಖನವನ್ನು ಕೊನೆಯವರೆಗೂ ಓದಿ.
ಗೂಗಲ್ ಪೇ ಪರ್ಸನಲ್ ಲೋನ್: (Google Pay Loans)
ಸ್ನೇಹಿತರೆ, ನೀವೇನಾದರೂ ಗೂಗಲ್ ಪೇ ಮೂಲಕ ತ್ವರಿತವಾಗಿ ಸಾಲವನ್ನು ಪಡೆಯಲು ಬಯಸಿದರೆ, ಇದು ಒಂದು ಉತ್ತಮವಾದ ಆಯ್ಕೆ ಎಂದು ಹೇಳಬಹುದು ಯಾಕೆಂದರೆ, ಬ್ಯಾಂಕಿನ ಅಲೆದಾಟವಿಲ್ಲದೆ. ಮತ್ತು ಹೆಚ್ಚಿನ ಮಟ್ಟದಲ್ಲಿ ದಾಖಲೆಗಳ ಅವಶ್ಯಕತೆ ಇಲ್ಲದೆ ನೀವು ಗೂಗಲ್ ಪೇ ಮೂಲಕ ತಕ್ಷಣವೇ ಸಾಲವನ್ನು ಪಡೆಯುವ ಅವಕಾಶವನ್ನು ಪಡೆಯುತ್ತೀರಿ.
ಸಾಲ ಪಡೆಯಲು ಅರ್ಹತೆಗಳು:
- ಸಾಲ ಪಡೆಯಲು ಬಯಸುವ ಅಭ್ಯರ್ಥಿಯು ಗೂಗಲ್ ಪೇ ಸಕ್ರಿಯ ಬಳಕೆದಾರನಾಗಿರಬೇಕು.
- ಉತ್ತಮ ಕ್ರೆಡಿಟ್ ಸ್ಕೋರನ್ನು ಸಾಲ ಪಡೆಯಲು ಬಯಸುವಂತಹ ಅಭ್ಯರ್ಥಿಯು ಹೊಂದಿರಬೇಕು.
- ಸಾಲ ಪಡೆಯಲು ತಿಂಗಳಿಗೆ ಅಂತ ಇಂತಿಷ್ಟು ಸ್ಥಿರ ಆದಾಯವನ್ನು ಹೊಂದಿರಬೇಕು.
ಗೂಗಲ್ ಪೇ ಸಾಲಕ್ಕೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರಗಳು
- ಮೊಬೈಲ್ ನಂಬರ್
ಮೇಲೆ ನೀಡಿರುವಂತಹ ದಾಖಲೆಗಳನ್ನು ಬಳಸಿಕೊಂಡು ನೀವು ಗೂಗಲ್ ಪೇ ಮೂಲಕ ತಕ್ಷಣವೇ ಒಂದು ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದು. ಹಾಗಾಗಿ ಸಾಲದ ಅವಶ್ಯಕತೆ ಇರುವವರು ಮೇಲೆ ನೀಡಿರುವ ದಾಖಲೆಗಳನ್ನು ಕಡ್ಡಾಯವಾಗಿ ಗೂಗಲ್ ಪೇ ನಲ್ಲಿ ಸಾಲವನ್ನು ಪಡೆಯುವಾಗ ಒದಗಿಸಬೇಕಾಗಿದೆ.
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಮೊಬೈಲ್ ನಲ್ಲಿ “ಗೂಗಲ್ ಪೇ” ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ.
ಕೆಳಗಡೆ ವ್ಯಾಪಾರ ಅಥವಾ ಪಾವತಿಗಳ ಟ್ಯಾಬ್ ಅಡಿಯಲ್ಲಿ ಬರುವ ಸಾಲದ ವಿಭಾಗಕ್ಕೆ ಹೋಗಿ.
ನೀವು ಅರ್ಹರಾಗಿ ಇದ್ದೀರಾ ಇಲ್ಲವಾ ಎಂಬುದನ್ನು ನೀವು ಅಲ್ಲಿ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.
ನಂತರ ಕೇಳಲಾಗುವಂತಹ ಅಗತ್ಯವಿರುವ ಮಾಹಿತಿಗಳನ್ನು ಭರ್ತಿ ಮಾಡಿ.
ನಂತರದಲ್ಲಿ ಗೂಗಲ್ ಪೇ ಗೆ ನೋಂದಾಯಿತ ಮೊಬೈಲ್ ನಂಬರಿಗೆ ಬರುವ ಓಟಿಪಿಯನ್ನು ನಮೂದಿಸಿ.
ಪರಿಶೀಲನೆಯ ನಂತರ ನೀವೇನಾದರೂ ಸಾಲಕ್ಕೆ ಅರ್ಹತೆ ಪಡೆದಿದ್ದರೆ, ನಿಮ್ಮ ಖಾತೆಗೆ ಸಾಲದ ಅನುಮೋದನೆಯ ಹಣವನ್ನು ಜಮಾ ಮಾಡಲಾಗುವುದು.