BSNL Free Plan: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ಕಳೆದ ಎರಡು ಮೂರು ತಿಂಗಳಿನಿಂದ ರಿಚಾರ್ಜ್ ಪ್ಲಾನ್ ಹೆಚ್ಚಳವಾದ ನಂತರ ಜನರು BSNL ಕಂಪನಿಯತ್ತ ಮುಖ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ, ಕಡಿಮೆ ಬೆಲೆಯಲ್ಲಾದರೂ ಪ್ಲಾನುಗಳು ದೊರಕುತ್ತವೆ ಎಂಬುವ ಉದ್ದೇಶದಿಂದ ಈ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲು ಬಹಳಷ್ಟು ಜನ ಮುಂದಾಗಿದ್ದಾರೆ.
ಹಾಗಾಗಿ ಈ ಲೇಖನದಲ್ಲಿ BSNL ಸಿಮ್ ಬಳಕೆದಾರರಿಗೆ ಹೊಸದಾಗಿ ಬಿಡುಗಡೆಯಾಗಿರುವಂತಹ ರಿಚಾರ್ಜ್ ಪ್ಲಾನ್ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿರುತ್ತದೆ. ಹಾಗೂ ಈ ಪ್ಲಾನ್ ಮುಖಾಂತರ ಯಾವೆಲ್ಲ ಲಾಭಗಳು ದೊರಕುತ್ತವೆ. ಎಂಬುವುದನ್ನು ಈ ಲೇಖನದಲ್ಲಿ ತಿಳಿಸಲಾಗಿರುತ್ತದೆ. ಆದ್ದರಿಂದ ಆಸಕ್ತಿ ಇರುವಂತವರು ಲೇಖನವನ್ನು ಕೊನೆಯವರೆಗೂ ಓದಿ.
BSNL ₹345 ರಿಚಾರ್ಜ್ ಪ್ಲಾನ್:
ಸ್ನೇಹಿತರೆ, BSNL ಕಂಪನಿ ಬಿಡುಗಡೆ ಮಾಡಿರುವಂತಹ 345 ರಿಚಾರ್ಜ್ ಪ್ಲಾನನ್ನು ನೀವು ಆಯ್ಕೆ ಮಾಡಿಕೊಂಡರೆ, 60 ದಿನಗಳ ಕಾಲ ಮಾನ್ಯತೆಯನ್ನು ಗ್ರಾಹಕರು ಪಡೆಯುತ್ತೀರಿ. ಈ ಪ್ಲಾನ್ ಆಯ್ಕೆ ಮಾಡಿಕೊಂಡರೆ, ಪ್ರತಿದಿನವೂ ಕೂಡ 1GB ಡೇಟಾ ಹಾಗೂ 100 SMS ಗಳನ್ನು 60 ದಿನಗಳವರೆಗೆ ಬಳಸಬಹುದಾಗಿರುತ್ತದೆ.
ಈ ಪ್ಲಾನ್ ಮುಖಾಂತರ ನೀವು ಅನಯಮಿತ ಕರೆಗಳನ್ನು ಕೂಡ ಬಳಸಬಹುದಾಗಿರುತ್ತದೆ. ಹಾಗೂ ಲೆಕ್ಕಾಚಾರ ಮಾಡಿದರೆ 60 ದಿನಗಳವರೆಗೆ ಅಂದರೆ 345 ರಿಚಾರ್ಜ್ ಪ್ಲಾನ ಆಯ್ಕೆ ಮಾಡಿಕೊಂಡರೆ, ಪ್ರತಿದಿನವೂ ಕೂಡ ನೀವು 5.75 ರೂಪಾಯಿಗಳನ್ನು ದೈನಂದಿನ ವೆಚ್ಚದಲ್ಲಿ ಈ ಸೇವೆಗಳನ್ನು ಪಡೆಯಲು ಖರ್ಚು ಮಾಡಿದಂತಾಗುತ್ತದೆ.
ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ ರಿಚಾರ್ಜ್ ಪ್ಲಾನ್ ಮೇಲಿನ ದರವನ್ನು ಟೆಲಿಕಾಂ ಕಂಪನಿಗಳು ಹೆಚ್ಚಿಗೆ ಮಾಡಿಕೊಂಡಾಗ BSNL ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ದೊರಕಿಸಿಕೊಡುವ ಕಂಪನಿ ಆಗಿತ್ತು. ಆದರೆ BSNL ನೆಟ್ವರ್ಕ್ ದೇಶದ ಪ್ರತಿ ಮೂಲೆಯಲ್ಲಿಯೂ ಕೂಡ ದೊರಕುವುದು ಕಠಿಣ ಎಂದು ಹೇಳಬಹುದು. ಆದ್ದರಿಂದ ಈ ಸಿಮ್ ಅನ್ನು ಕೊಳ್ಳಲು ಬಯಸುವಂತಹ ಗ್ರಾಹಕರು ನಿಮ್ಮ ಕ್ಷೇತ್ರದಲ್ಲಿ ನೆಟ್ವರ್ಕ್ ಸರಿಯಾಗಿದೆಯಾ? ಇಲ್ಲವಾ? ಎಂದು ಪರಿಶೀಲಿಸಿ ನಂತರ ಸಿಮ್ ಕೊಳ್ಳುವುದು ಸೂಕ್ತ.
ಓದುಗರ ಗಮನಕ್ಕೆ: ನೀವೇನಾದರೂ BSNL ಸಿಮ್ ಬಳಕೆದಾರರಾಗಿದ್ದರೆ, ನೀವು ರಿಚಾರ್ಜ್ ಪ್ಲಾನ್ ಗಳನ್ನು ನಿಮ್ಮ ಇಚ್ಛೆಯ ಮೇರೆಗೆ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತೀರಾ. ಹಾಗೂ ಈ ಪ್ಲಾನ್ ಗಳ ಬಗ್ಗೆ ಯಾವುದೇ ರೀತಿಯ ತೊಂದರೆ ನಿಮಗೆ ಉಂಟಾದಲ್ಲಿ ಇದಕ್ಕೆ ನಮ್ಮ “ಕರ್ನಾಟಕ ಶಿಕ್ಷಣ” ಜಾಲತಾಣವು ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ರಿಜಲ್ ಪ್ಲಾನುಗಳನ್ನು ಆಯ್ಕೆ ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ.