Airtel Best Offer: ಏರ್ಟೆಲ್ ಬಳಕೆದಾರರಿಗೆ ಸಿಹಿ ಸುದ್ದಿ! ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ!

Airtel Best Offer: ನಮಸ್ಕಾರ ಕನ್ನಡದ ಜನತೆ, ಏರ್ಟೆಲ್ ಪ್ರಿಪೇಯ್ಡ್ ಬಳಕೆದಾರರಿಗೆ ಗಣೇಶ ಹಬ್ಬದ ಪ್ರಯುಕ್ತ ಹೊಸ ರಿಚಾರ್ಜ್ ಪ್ಲಾನುಗಳನ್ನು ಬಿಡುಗಡೆ ಮಾಡಲಾಗಿದ್ದು, ಏರ್ಟೆಲ್ ಗ್ರಾಹಕರ ಮುಖದಲ್ಲಿ ಸಂತಸವನ್ನು ಉಂಟುಮಾಡಿದೆ ಎಂದು ಹೇಳಬಹುದು. ಯಾಕೆಂದರೆ ಕೈಗೆಟಕುವ ದರಗಳಲ್ಲಿ ಉತ್ತಮವಾದ ಆಫರ್ ಗಳನ್ನು ಏರ್ಟೆಲ್ ಕಂಪನಿಯು ತನ್ನ ಗ್ರಾಹಕರಿಗೆ ನೀಡಲು ಆರಂಭಿಸಿದೆ. 

ಒಂದಾನೊಂದು ಕಾಲದಲ್ಲಿ ಏರ್ಟೆಲ್ ಭಾರತದ ಮೂಲೆ ಮೂಲೆಯಲ್ಲಿಯೂ ಕೂಡ ಅತ್ಯಂತ ಜನಪ್ರಿಯತೆಯನ್ನು ಹೊಂದಿರುವ ಟೆಲಿಕಾಂ ಕಂಪನಿ ಆಗಿತ್ತು. ಆದರೆ ಇನ್ನೂ ಕೂಡ ಅತಿ ಹೆಚ್ಚಿನ ಪ್ರಮಾಣದಲ್ಲಿ ಏರ್ಟೆಲ್ ಅನ್ನು ಜನರು ಬಳಸುತ್ತಾರೆ ಎಂದು ಹೇಳಿದರೆ ತಪ್ಪಾಗಲಾರದು. ಭಾರತ ದೇಶದಲ್ಲಿ ಎಲ್ಲಾ ಕಡೆಗೂ ದೊರಕುವ ಒಂದು ಉತ್ತಮವಾದ ನೆಟ್ವರ್ಕ್ ಎಂದರೆ ಅದು ಏರ್ಟೆಲ್ ಎಂದು ಹೇಳಬಹುದು. 

ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಗಳು: 

ರೂ. ₹979ರ ರಿಚಾರ್ಜ್ ಪ್ಲಾನ್:

ನೀವೇನಾದರೂ ಈ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ ದಿನಕ್ಕೆ 2GB ಡೇಟಾವನ್ನು, 80 ದಿನಗಳವರೆಗೆ ವ್ಯಾಲಿಡಿಟಿಯನ್ನು, ಅನ್ಲಿಮಿಟೆಡ್ ಕರೆಗಳ ಜೊತೆಗೆ ದಿನನಿತ್ಯ ಕೂಡ 100 ಎಸ್ಎಂಎಸ್ ಗಳನ್ನು ಬಳಸುತ್ತೀರಾ. ಹಾಗೂ ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ ಜೊತೆಗೆ 22ಕ್ಕಿಂತ ಹೆಚ್ಚಿನ OTT ಪ್ಲಾಟ್ಫಾರ್ಮ್ ಗಳ ಸೇವೆಯನ್ನು ಉಚಿತವಾಗಿ ಆನಂದಿಸಬಹುದು. ಇದರ ಜೊತೆಜೊತೆಗೆ ನೀವು 10GB ಡೇಟಾ ಹೆಚ್ಚುವರಿ ಆಗಿ ಪಡೆದುಕೊಳ್ಳುವ ಅವಕಾಶ ಇರುತ್ತದೆ.

ರೂ. ₹1,029 ರ ರೀಚಾರ್ಜ್ ಪ್ಲಾನ್:

ನೀವೇನಾದರೂ ಈ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ ದಿನನಿತ್ಯವೂ ಕೂಡ 2GB ಡೇಟಾ ಜೊತೆಗೆ 84 ದಿನಗಳ ಸುಧೀರ್ಘವಾದ ವ್ಯಾಲಿಡಿಟಿಯನ್ನು ಪಡೆಯುತ್ತೀರಾ. ಹಾಗೂ ಈ ಪ್ಲಾನ್ ನ ಮುಖಾಂತರ ನೀವು ಅನಿಯಮಿತ ಕರೆಗಳನ್ನು 84 ದಿನಗಳ ವರೆಗೆ ಮಾಡಬಹುದಾಗಿರುತ್ತದೆ. ಮತ್ತು ಪ್ರತಿನಿತ್ಯವೂ ಕೂಡ 100 ಎಸ್ಎಂಎಸ್ ಗಳ ಸೇವೆಯನ್ನು ಬಳಸಬಹುದಾಗಿರುತ್ತದೆ. ಈ ಯೋಜನೆಯ ಜೊತೆಗೆ “ಡಿಸ್ನಿ ಪ್ಲಸ್ ಹಾಟ್ ಸ್ಟಾರ್” ಸಬ್ಸ್ಕ್ರಿಪ್ಷನ್ ಅನ್ನು ಪಡೆದುಕೊಳ್ಳುತ್ತೀರಾ. ಹಾಗೂ 22 OTT ಪ್ಲಾಟ್ ಫಾರ್ಮ್ಗಳ ಸೇವೆಯನ್ನು ಉಚಿತವಾಗಿ ಆನಂದಿಸಬಹುದಾಗಿರುತ್ತದೆ. ಈ ಪ್ಲಾನ್ ನ ಜೊತೆಗೆಯೂ ಕೂಡ ನೀವು 10GB ಹೆಚ್ಚುವರಿ ಡೇಟ್ ಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ರೂ. ₹3,599 ರ ರಿಚಾರ್ಜ್ ಪ್ಲಾನ್:

ನೀವೇನಾದರೂ ಈ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ, ದಿನಕ್ಕೆ 2GB ಡೇಟಾ ಪ್ರತಿನಿತ್ಯ ಆನಿಯಮಿತ ಕರೆಗಳು ಹಾಗೂ ದಿನನಿತ್ಯವೂ ಕೂಡ ನೀವು 100 ಎಸ್ಎಂಎಸ್ ಗಳನ್ನು ಬಳಸಬಹುದು. ಹಾಗೂ 10GB ಹೆಚ್ಚುವರಿ ಡೇಟಾವನ್ನು ಕೂಡ ಪಡೆಯಬಹುದಾಗಿರುತ್ತದೆ. ಒಂದು ವರ್ಷಗಳ ವ್ಯಾಲಿಡಿಟಿಯನ್ನು ನೀವು ಪಡೆದುಕೊಳ್ಳುತ್ತೀರಾ. 365 ದಿನಗಳ ವ್ಯಾಲಿಡಿಟಿಯ ಜೊತೆಗೆ “ಅಮೆಜಾನ್ ಪ್ರೈಮ್”  ಮತ್ತು “ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ” ಸಬ್ಸ್ಕ್ರಿಪ್ಷನ್ ಜೊತೆಗೆ 22ಕ್ಕೂ ಹೆಚ್ಚು OTT ಪ್ಲಾಟ್ ಫಾರ್ಮ್ ಗಳನ್ನು ಉಚಿತವಾಗಿ ಆನಂದಿಸಬಹುದು.

ಮೇಲೆ ನೀಡಿರುವ ಫ್ಯಾನುಗಳಲ್ಲಿ ಸುಧೀರ್ಘಾವಧಿಯ ವ್ಯಾಲಿಡಿಟಿಯನ್ನು ನೀಡುವ ಮತ್ತು ತಿಂಗಳು ತಿಂಗಳು ರಿಚಾರ್ಜ್ ಮಾಡುವ ಚಿಂತೆಯನ್ನು ದೂರ ಮಾಡುವ ಉತ್ತಮ ಪ್ಲಾನು ಗಳಾಗಿವೆ. ಓ ಟಿ ಟಿ ಪ್ರಿಯರಿಗೆ ಒಂದು ಉತ್ತಮವಾದ ಪ್ಲಾನುಗಳು ಎಂದು ಹೇಳಬಹುದು. ಸುಧೀರ್ಘಾವಧಿಯ ವ್ಯಾಲಿಡಿಟಿಯನ್ನು ಮೇಲೆ ಕೊಟ್ಟಿರುವ ಪ್ಲಾನುಗಳಲ್ಲಿ ನೀವು ಕಾಣಬಹುದಾಗಿರುತ್ತದೆ.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!