Aicte Scholarship: ನಮಸ್ಕಾರ ಜನತೆ, ಈ ಲೇಖನ ಮೂಲಕ ತಿಳಿಸುವ ವಿಷಯವೇನೆಂದರೆ, ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಇರುವಂತಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಆಯ್ಕೆಯಾದಲ್ಲಿ 50,000 ದವರೆಗೆ ಸ್ಕಾಲರ್ಶಿಪ್ ಮೊತ್ತವನ್ನು ನೀಡಲಾಗುತ್ತದೆ. ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು? ಹಾಗೂ ಇದರ ಬಗ್ಗೆ ಬೇಕಾಗುವ ಸಂಪೂರ್ಣವಾದ ವಿವರಗಳು ಇಲ್ಲಿವೆ.
Aicte ಸ್ಕಾಲರ್ಶಿಪ್ (Aicte Scholarship)
ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ Aicte ಪ್ರಗತಿ ಸ್ಕಾಲರ್ಶಿಪ್ ಫಾರ್ಮ್ ಗರ್ಲ್ಸ್ ಅನುಮೋದಿತ ಸಂಸ್ಥೆಯು ಟೆಕ್ನಿಕಲ್ ಪ್ರೋಗ್ರಾಮ್ ನಲ್ಲಿ ಪದವಿ ಹಾಗೂ ಡಿಪ್ಲೋಮಾ ಮೊದಲ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಹುಡುಗಿಯರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಹತೆಗಳು:
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಮಹಿಳಾ ವಿದ್ಯಾರ್ಥಿಯು ಭಾರತದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಡಿಪ್ಲೋಮಾ ಹಾಗೂ ಪದವಿ ಇಲ್ಲವೇ ಸ್ನಾತಕೋತ್ತರ ಪದವಿ ಮೊದಲ ವರ್ಷದಲ್ಲಿ ಅಥವಾ ಎರಡನೇ ವರ್ಷದಲ್ಲಿ ಪ್ರವೇಶ ಪಡೆದವರಾಗಿರಬೇಕು.
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನಿಯು ಮೊದಲು ಗಮನಿಸಬೇಕಾದ ಅಂಶವೆಂದರೆ, ಭಾರತದ ಪ್ರಜೆಯಾಗಿರಬೇಕು ಅಥವಾ ಭಾರತ ದೇಶದ ಮಹಿಳೆಯಾಗಿರಬೇಕು. ಹಾಗೂ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಾದರೆ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31, 2024 ಆಗಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ನೀವೇನಾದರೂ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿದ್ದರೆ ಕೆಳಗೆ ನೀಡಿರುವ ಅಧಿಕೃತ ಜಾಲತಾಣದ ಲಿಂಕನ್ನು ಬಳಸಿಕೊಂಡು ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕನ್ನು ಈ ಕೆಳಗಡೆ ನೀಡಲಾಗಿರುತ್ತದೆ ನೋಡಿ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್: ಅಪ್ಲೈ ಮಾಡಿ!
ಮೇಲೆ ಕೊಟ್ಟಿರುವ ಜಾಲತಾಣವನ್ನು ಬಳಸಿಕೊಂಡು ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ನಿಮಗೇನಾದರೂ ಅರ್ಜಿ ಸಲ್ಲಿಸಲು ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಇದೇ ತರಹದ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಬಹುದು.