Annabhagya: ನಮಸ್ಕಾರ ಎಲ್ಲರಿಗೂ, ಕರ್ನಾಟಕದ ಸಮಸ್ತ ಜನತೆ, ಹೇಗಿದ್ದೀರಾ? ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದಾಗ ನಿಂದ ಹಿಡಿದು ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ ಬಗ್ಗೆ ಒಂದು ಮಹತ್ವದ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿರುತ್ತದೆ. ಪೂರ್ತಿ ವಿವರಗಳನ್ನು ಪಡೆಯಲು ಲೇಖನವನ್ನು ಕೊನೆಯವರೆಗೂ ಓದಿ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಹಿಡಿದು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಅನ್ನಭಾಗ್ಯ ಯೋಜನೆಯ ಪಾತ್ರವು ಪ್ರಮುಖವಾದದ್ದು ಏಕೆಂದರೆ ಪ್ರತಿಯೊಬ್ಬ ಕುಟುಂಬದ ಸದಸ್ಯನಿಗೆ ತಿಂಗಳಿಗೆ 10KG ಹಕ್ಕಿಯನ್ನು ನೀಡುವುದು ಈ ಯೋಜನೆಯ ಗುರಿಯಾಗಿತ್ತು. 10 ಕೆಜಿ ಅಕ್ಕಿ ನೀಡಲು ಸಾಧ್ಯವಾಗದ ಕಾರಣ ಐದು ಕೆಜಿ ಹಕ್ಕಿಯನ್ನು ನೀಡಿ ಉಳಿದ 5 ಕೆಜಿ ಅಕ್ಕಿಯ ಹಣವನ್ನು 1 ಕೆ.ಜಿ ಅಕ್ಕಿಗೆ ₹34 ರೂಪಾಯಿಯಂತೆ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು.
ಅನ್ನಭಾಗ್ಯ (Annabhagya) ಯೋಜನೆ ಹೊಸ ಅಪ್ಡೇಟ್:
ರೇಷನ್ ಕಾರ್ಡನ್ನು ಹೊಂದಿರುವವರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ತಿಂಗಳು ಕೂಡ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಈ ಹಿಂದೆ ಹಕ್ಕಿಯು ಲಭ್ಯವಿಲ್ಲದ ಕಾರಣ 5 ಕೆಜಿ ಅಕ್ಕಿ ನೀಡಿ ಉಳಿದ 5ಕೆಜಿ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆದರೆ ಇದೀಗ ಹಣವನ್ನು ನೀಡುವುದಿಲ್ಲ. ಏಕೆಂದರೆ, ಅದರ ಕಾರಣವೂ ಈ ಕೆಳಗೆ ಇದೆ ನೋಡಿ.
ಇದೀಗ ಉಳಿದ 5 ಕೆಜಿ ಅಕ್ಕಿ ಹಣವನ್ನು ಜಮಾ ಮಾಡುತ್ತಿರುವುದನ್ನು ನಿಲ್ಲಿಸಿ, ಒಟ್ಟು ಹತ್ತು ಕೆಜಿ ಅಕ್ಕಿಯನ್ನು ವಿತರಣೆ ಮಾಡುವುದಾಗಿ ತಿಳಿದು ಬಂದಿರುತ್ತದೆ. ಇದರಿಂದಾಗಿ ಅನ್ನ ಭಾಗ್ಯ ಯೋಜನೆಯ ಹಣವನ್ನು ಸ್ಥಗಿತ ಮಾಡಲಾಗಿದೆ ಎಂದು ತಿಳಿದುಬಂದಿರುತ್ತದೆ. ಈ ಮೊದಲು ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಅಕ್ಕಿಯ ಕೊರತೆಯಿಂದಾಗಿ 5 ಕೆ.ಜಿ ಅಕ್ಕಿಯನ್ನು ಮಾತ್ರ ನೀಡಿ ಉಳಿದ 5 ಕೆಜಿ ಅಕ್ಕಿ ಹಣವನ್ನು ಫಲಾನುಭವಿಗಳಿಗೆ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ.
ಆದರೆ ಇನ್ನು ಮುಂದೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ದೊರಕಲಿದೆ ಎಂದು ತಿಳಿದುಬಂದಿರುತ್ತದೆ. ಇದು ಒಂದು ಖುಷಿ ವಿಚಾರ ಎಂದೇ ಹೇಳಬಹುದು. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ವತಿಯಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಇನ್ನು ಮುಂದೆ ರೇಷನ್ ಕಾರ್ಡ್ ದಾರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ತಿಳಿಸಲಾಗಿರುತ್ತದೆ. ಆದ್ದರಿಂದ ಅನ್ನ ಭಾಗ್ಯ ಯೋಜನೆಯ ಹಣ ಸ್ಥಗಿತಗೊಳಿಸಲಾಗಿರುವುದು.
ಓದುಗರ ಗಮನಕ್ಕೆ: ಈ ಲೇಖನದಲ್ಲಿ ಅನ್ನ ಭಾಗ್ಯ ಯೋಜನೆಯ ಬಗ್ಗೆ ಒಂದು ಮಹತ್ವವಾದ ಘೋಷಣೆಯನ್ನು ತಿಳಿಸಲಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಕುಟುಂಬದ ಇತರ ಸದಸ್ಯರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ. ಇದೇ ತರಹದ ಸುದ್ದಿಗಳನ್ನು ನೀವು ದಿನನಿತ್ಯವೂ ಕೂಡ ನಮ್ಮ ಜಾಲತಾಣದಲ್ಲಿ ಕಾಣಬಹುದಾಗಿದೆ.