Axis Bank Loans: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ನೀವು ಎಕ್ಸಿಸ್ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ, ಈ ಲೇಖನವು ನಿಮಗೆ ಉಪಯುಕ್ತವಾಗಲಿದೆ. ಈ ಲೇಖನದಲ್ಲಿ ಎಕ್ಸಿಸ್ ಬ್ಯಾಂಕ್ ಮೂಲಕ 40 ಲಕ್ಷ ವರೆಗೆ ವೈಯಕ್ತಿಕ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು? ಮತ್ತು ಬಡ್ಡಿದರ ಎಷ್ಟಿರುತ್ತದೆ? ಮತ್ತು ಸಾಲ ಪಡೆದುಕೊಳ್ಳಲು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ? ಎಂಬುವುದನ್ನು ಈ ಕೆಳಗಡೆ ನೀಡಲಾಗಿರುತ್ತದೆ ನೋಡಿ.
ಎಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್: (Axis Bank Loans)
ಎಕ್ಸಿಸ್ ಬ್ಯಾಂಕ್ ಸಂಬಳ ಪಡೆಯುವ ವ್ಯಕ್ತಿಗಳಿಗೆ 11.25% ನಿಂದ ಪ್ರಾರಂಭವಾಗುವಂತಹ ಸ್ಥಿರ ಬಡ್ಡಿದರ ದೂಪದಲ್ಲಿ ವೈಯಕ್ತಿಕ ಸಾಲವನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಗರಿಷ್ಠ ನೀವು 7 ವರ್ಷದವರೆಗೆ 40 ಲಕ್ಷ ವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಆನ್ಲೈನ್ ಮೂಲಕ ಈ ಸಾಲಕ್ಕೆ ಅರ್ಜಿಯನ್ನು ನೀವು ಸಲ್ಲಿಸಬಹುದಾಗಿರುತ್ತದೆ. ಅಥವಾ ನಿಮ್ಮ ಹತ್ತಿರವಿರುವ ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಆದರು ಕೂಡ ನೀವು ಈ ಸಾಲವನ್ನು ಪಡೆಯಬಹುದು.
ಎಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲದ ವಿವರಗಳು:
ಸಾಲದ ಮೊತ್ತ | 40 ಲಕ್ಷದವರೆಗೆ |
ಬಡ್ಡಿದರ | 11.25% |
ಸಾಲದ ಮರುಪಾವತಿ ಅವಧಿ | 1-7 ವರ್ಷಗಳು |
ಸಂಸ್ಕರಣಾ ಶುಲ್ಕ | ಸಾಲದ ಮೊತ್ತದ 2% ವರೆಗೆ |
ಮಾಸಿಕ ವೇತನದ ಅರ್ಹತೆ | ಎಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ 15,000 & ಗ್ರಾಹಕರಲ್ಲದವರಿಗೆ 25,000 |
ಸಾಲವನ್ನು ಪಡೆಯಲು ಬಯಸುವ ವ್ಯಕ್ತಿಯ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ನ ಆಧಾರದ ಮೇಲೆ ಸಾಲವನ್ನು ನೀಡಲಾಗುತ್ತದೆ. ಸಾಲು ನೀಡುವಾಗ ಅರ್ಜಿದಾರನ ವಯಸ್ಸು ಅರ್ಜಿದಾರನಾ ಮಾಸಿಕ ಸಂಬಳ ಹಾಗೂ ಸಾಲಕ್ಕೆ ಬೇಕಾಗುವ ಇನ್ನಿತರ ಅಂಶಗಳ ಬಗ್ಗೆ ವಿಚಾರಿಸಲಾಗುವುದು.
ವೈಯಕ್ತಿಕ ಸಾಲದ ವಿಧಗಳು:
- ಮದುವೆಗೆ ವೈಯಕ್ತಿಕ ಸಾಲ ಸೌಲಭ್ಯ
- ಮನೆ ನವೀಕರಣಕ್ಕಾಗಿ ವೈಯಕ್ತಿಕ ಸಾಲ
ಸಾಲ ಪಡೆಯಲು ಅರ್ಹತೆಗಳು:
ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಮಾಸಿಕ ಆದಾಯವನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ. ಅಥವಾ ಸ್ವಯಂ ಉದ್ಯೋಗವನ್ನು ಮಾಡುತ್ತಿರಬೇಕು ಎಂದು ತಿಳಿಸಲಾಗಿರುತ್ತದೆ.
ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು 21 ವರ್ಷ ಮೇಲ್ಪಟ್ಟಿರಬೇಕು ಎಂದು ತಿಳಿಸಲಾಗಿದೆ.
ಸಾಲ ಪಡೆಯಲು ಬಯಸುವಂತಹ ಅರ್ಜಿದಾರರು 60 ವರ್ಷ ಮೇಲ್ಪಟ್ಟಿದ್ದರೆ ಸಾಲವನ್ನು ಅನುಮೋದಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಸಾಲಕ್ಕೆ ಅಗತ್ಯ ದಾಖಲೆಗಳು:
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಪೂರ್ತಿಯಾಗಿ ತುಂಬಿರುವ ಸಾಲದ ಅರ್ಜಿ ನಮೂನೆ
- ಕೆವೈಸಿ ಸಂಬಂಧಿತ ದಾಖಲೆಗಳು
- ಜನ್ಮ ದಿನಾಂಕದ ಪುರಾವೆ
- ಆದಾಯ ಪುರಾವೆ
- ಸಹಿ
ಮೇಲೆ ನೀಡಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ನಿಮ್ಮ ಹತ್ತಿರವಿರುವಂತಹ ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ವಯಕ್ತಿಕ ಸಾಲದ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ಪಡೆಯಬಹುದು. ಅಥವಾ ಇಲ್ಲಿ ಕೊಟ್ಟಿರುವ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 1-860-419-5555 / 1-860-500-5555 / +91 40 67174100