“ಬ್ಯಾಂಕ್ ಆಫ್ ಬರೋಡ” ಮೂಲಕ 10 ಲಕ್ಷದವರೆಗೆ ಮುದ್ರಾ ಸಾಲ! ಇನ್ನಷ್ಟು ಹೆಚ್ಚಿನ ವಿವರ ಇಲ್ಲಿದೆ! Bank of Baroda Loan

Bank of Baroda Loan: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಬ್ಯಾಂಕ್ ಆಫ್ ಬರೋಡ ವತಿಯಿಂದ 5 ಲಕ್ಷದವರೆಗೆ ಉದ್ಯೋಗವನ್ನು ಆರಂಭಿಸಲು ಮತ್ತು ಸಣ್ಣ ವ್ಯಾಪಾರ ಮಾಲೀಕರಿಗೆ ಸಹಾಯಕವಾಗುವಂತೆ ಮುದ್ರಾ ಸಾಲವನ್ನು ಪಡೆಯುವ ವಿಧಾನ ಹಾಗೂ ಪಡೆಯಲು ಇರುವಂತಹ ಅರ್ಹತೆಗಳ ಬಗ್ಗೆ ಈ ಲೆಕ್ಕದಲ್ಲಿ ಚರ್ಚಿಸೋಣ. ಆದ ಕಾರಣ ಬ್ಯಾಂಕ್ ಆಫ್ ಬರೋಡ ಮೂಲಕ ಮುದ್ರಾ ಸಾಲವನ್ನು ಪಡೆಯಲು ಬಯಸುವಂತಹ ಅಭ್ಯರ್ಥಿಗಳು ಲೇಖನವನ್ನು ಕೊನೆಯವರೆಗೂ ಓದಿ.

Bank of Baroda Loan ಮುದ್ರಾ ಸಾಲ ವಿಶೇಷತೆಗಳು: 

ಮುದ್ರಾ ಸಾಲ ಯೋಜನೆಯ ಹಣವನ್ನು ವಿಶೇಷವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ. 

ಶಿಶು ಮುದ್ರಾ ಸಾಲ: 50,000 ವರೆಗೆ ಅತಿ ಸಣ್ಣ ವ್ಯಾಪಾರ ಅಥವಾ ಸ್ಟಾರ್ಟ್ ಅಪ್ ಗಳಿಗೆ ಈ ಸಾಲವನ್ನು ಪಡೆಯಬಹುದಾಗಿರುತ್ತದೆ. 

ಕಿಶೋರ್ ಮುದ್ರಾ ಸಾಲ: 5 ಲಕ್ಷಗಳವರೆಗೆ ಅಭಿವೃದ್ಧಿಯನ್ನು ಹೊಂದಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳದ ಅಗತ್ಯವಿರುವ ವ್ಯವಹಾರಗಳಿಗೆ ಈ ಸಾಲವನ್ನು ಪಡೆಯಬಹುದಾಗಿರುತ್ತದೆ. 

ತರುಣ್ ಮುದ್ರಾ ಸಾಲ: ಅಗತ್ಯವಿರುವಂತಹ ಸ್ಥಾಪಿತ ವ್ಯವಹಾರಗಳಿಗೆ ವಿನ್ಯಾಸಗೊಳಿಸಲು 10 ಲಕ್ಷದವರೆಗೆ ಮುದ್ರಾ ಯೋಜನೆಯ ಮೂಲಕ ಸಾಲವನ್ನು ಪಡೆಯಬಹುದಾಗಿರುತ್ತದೆ. 

Bank of Baroda Loan ಅರ್ಹತೆಗಳು: 

  • ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಭಾರತೀಯ ಪ್ರಜೆಯಾಗಿರಬೇಕು. 
  • ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಖಾತೆ ಇರುವಂತಹ ಗ್ರಾಹಕರು ಮಾತ್ರ ಅರ್ಜಿ ಸಲ್ಲಿಸಬಹುದು. 
  • ಈ ಸಲವೂ ಉತ್ಪಾದನೆ, ಸೇವೆಗಳು ಹಾಗೂ ವ್ಯಾಪಾರದ ವ್ಯವಹಾರಗಳಿಗೆ ಮಾತ್ರ ಆಗಿರುತ್ತದೆ.
  • ಬ್ಯಾಂಕ್ ಆಫ್ ಬರೋಡ ದಲ್ಲಿ ನೀವು ಉತ್ತಮವಾದ ಬ್ಯಾಂಕಿಂಗ್ ದಾಖಲೆಯನ್ನು ಹೊಂದಿರಬೇಕಾಗಿರುತ್ತದೆ. 
  • ಸಾಲದ ಮೇಲಿನ ಬಡ್ಡಿ ದರಗಳು ಬ್ಯಾಂಕಿನ ಶರತ್ತುಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತವೆ. 

ಬೇಕಾಗುವ ದಾಖಲೆಗಳು: 

  • ಭರ್ತಿ ಮಾಡಿರುವ ಸಾಲದ ಅರ್ಜಿ ನಮೂನೆ 
  • ಆಧಾರ್ ಕಾರ್ಡ್ 
  • ಪಾನ್ ಕಾರ್ಡ್ 
  • ಜಿ ಎಸ್ ಟಿ ನೋಂದಣಿಯ ವಿವರಗಳು 
  • ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ 
  • ವ್ಯಾಪಾರದ ನೋಂದಣಿ 
  • ಸಲಕರಣೆಗಳ ಪಟ್ಟಿ 

ಸಾಲ ಪಡೆಯುವ ವಿಧಾನ: 

1) ನೀವು ಬ್ಯಾಂಕ್ ಆಫ್ ಬರೋಡದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ. 

2) ಸಾಲದ ವಿಭಾಗವನ್ನು ಹುಡುಕಿ ಮುದ್ರಾ ಸಾಲವನ್ನು ನೀವು ಆಯ್ಕೆ ಮಾಡಿಕೊಳ್ಳಿ. 

3) ಆನ್ಲೈನ್ ಮೂಲಕ ಮುದ್ರ ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

4) ಫಾರ್ಮನ್ನು ನಿಮ್ಮ ಸಂಪೂರ್ಣ ವೈಯಕ್ತಿಕ ವಿವರಗಳೊಂದಿಗೆ ಭರ್ತಿ ಮಾಡಿರಿ.

5) ನಿಮ್ಮ ಅರ್ಜಿಯು ತಲುಪಿದ ನಂತರ ಬ್ಯಾಂಕಿನ ವತಿಯಿಂದ ಬರುವ ಕರೆಗಾಗಿ ನಿರೀಕ್ಷಿಸಿ. 

6) ಅನುಮೋದನೆಯ ನಂತರ ನಿಮ್ಮ ಖಾತೆಗೆ ಹಣವನ್ನು ಜಮ್ಮ ಮಾಡಲಾಗುತ್ತದೆ.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!