BPL Ration Card: ನಮಸ್ಕಾರ ಎಲ್ಲರಿಗೂ, ರಾಜ್ಯದ ಜನತೆಗೆ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ರೇಷನ್ ಕಾರ್ಡ್ ಸರ್ಕಾರದ ವತಿಯಿಂದ ಲಭ್ಯವಿರುವಂತಹ ಯೋಜನೆಗಳ ಲಾಭವನ್ನು ಪಡೆಯಲು ಅಗತ್ಯವಾದ ದಾಖಲೆಯಾಗಿರುತ್ತದೆ. ಬಡತನ ರೇಖೆಗಿಂತ ಕೆಳಗುಳಿದ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ ವಿಶೇಷವಾದ ದಾಖಲೆಯಾಗಿರುತ್ತದೆ. ಹಾಗಾಗಿ ಈ ಲೇಖನದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಇರುವವರಿಗೆ ನೀಡಿರುವ ಹೊಸ ಅಪ್ಡೇಟ್ ಬಗ್ಗೆ ತಿಳಿಸಲಾಗಿದೆ.
ಬಿಪಿಎಲ್ ರೇಷನ್ ಕಾರ್ಡ್ ದಾರರಿಗೆ ಅನುಕೂಲವಾಗುವಂತೆ ಅನ್ನಭಾಗ್ಯ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿತ್ತು. ಈ ಯೋಜನೆಯ ಮೂಲಕ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಪಡೆಯಲು ಸೌಲಭ್ಯವನ್ನು ನೀಡಲಾಗಿತ್ತು. ಆದರೆ 5 ಕೆಜಿ ಅಕ್ಕಿಯನ್ನು ನೀಡಿ ಮತ್ತು ಉಳಿದ 5 ಕೆಜಿಯ 170 ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಬಹುದಾಗಿತ್ತು.
ಸರ್ಕಾರವು ಈಗ ಅಕ್ಕಿ ನೀಡುವುದರ ಜೊತೆಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡುತ್ತಿದೆ. ಬಹಳಷ್ಟು ಜನರ ಖಾತೆಗೆ ಹಣ ವರ್ಗಾವಣೆಯಾಗಿಲ್ಲ. ಈ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡು ಹೊಂದಿದವರಿಗೆ ಒಳ್ಳೆಯ ಸುದ್ದಿಯನ್ನು ಸರ್ಕಾರವು ಹೊರತಂದಿರುತ್ತದೆ. ಬಾಗಿ ಇರುವಂತಹ ಪಾವತಿಗಳನ್ನು ಫಲಾನುಭವಿಗಳ ಖಾತೆಗೆ ಮುಂದಿನ ವಾರ ಜಮಾ ಮಾಡಲಾಗುವುದು ಎಂದು ಸರ್ಕಾರವು ತಿಳಿಸಿದೆ.
ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದಾಗಿ ಪಾವತಿಗಳ ವಿಳಂಬವಾಗಿರಬಹುದು ಎಂದು ಕೆ.ಎಚ್. ಮುನಿಯಪ್ಪನವರು ತಿಳಿಸಿರುತ್ತಾರೆ. ಬಾಕಿ ಇರುವಂತಹ ಅನ್ನಭಾಗ್ಯ ಯೋಜನೆಯ ಹಣವನ್ನು ಮುಂದಿನ ವಾರ ಪಾಲನಾಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.
ಬಿಪಿಎಲ್ ರೇಷನ್ ಕಾರ್ಡ್ದಾರರು ಬಾಕಿ ಇರುವಂತಹ ಹಣವನ್ನು ಸ್ವೀಕರಿಸಲು ಎದುರು ನೋಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಕೇವಲ 5 ಕೆಜಿ ಅಕ್ಕಿಯಿಂದ ಈ ಅನ್ನ ಭಾಗ್ಯ ಯೋಜನೆಯು ಪೂರ್ತಿಯಾಗುವುದಿಲ್ಲ ಉಳಿದ 5 ಕೆಜಿ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂಬ ಮಾಹಿತಿಗಳು ಕೇಳಿಬಂದಿದೆ.