BSNL Good News: ನಮಸ್ಕಾರ ಕರ್ನಾಟಕ ಜನತೆ, ಈ ಲೇಖನದಲ್ಲಿ ನಿಮಗೆ ತಿಳಿಸುವ ವಿಷಯವೇನೆಂದರೆ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಬಿಎಸ್ಎನ್ಎಲ್ ಬಳಕೆದಾರರು ಸಂತಸದಲ್ಲಿದ್ದಾರೆ ಎಂದು ಹೇಳಬಹುದು. ಯಾಕೆಂದರೆ, ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನುಗಳು ದೊರಕುವುದು ಬಿಎಸ್ಎನ್ಎಲ್ ನಲ್ಲಿ ಮಾತ್ರ ಎಂದು ಹೇಳಬಹುದು. ಆದ್ದರಿಂದ ಬಿಎಸ್ಎನ್ಎಲ್ ಕಡೆಗೆ ಬಳಕೆದಾರರ ಆದ್ಯತೆಯು ಬದಲಾವಣೆ ಆಗಿದೆ ಎಂದು ಹೇಳಬಹುದು.
ಬಿಎಸ್ಎನ್ಎಲ್ ಎಲ್ಲ ಈ ರಿಚಾರ್ಜ್ ಪ್ಲಾನ್ ನಲ್ಲಿ 365 ದಿನಗಳು ಸುದೀರ್ಘ ಅವಧಿಯ ವ್ಯಾಲಿಡಿಟಿಯನ್ನು ಕೂಡ ನೀಡಲಾಗುತ್ತದೆ. ಇನ್ನು ಹೆಚ್ಚಿನ ಹಲವಾರು ಪ್ರಯೋಜನಗಳನ್ನು ಈ ಪ್ಲಾನ್ ನಲ್ಲಿ ಬಿಎಸ್ಎನ್ಎಲ್ ಬಳಕೆದಾರರಿಗೆ ನೀಡಲಾಗುತ್ತದೆ. ಎಲ್ಲ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
ರೂಪಾಯಿ ₹1,198 ರಿಚಾರ್ಜ್ ಪ್ಲಾನ್:
ನೀವೇನಾದರೂ ಈ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ ಒಟ್ಟು 365 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತೀರಾ ಈ ಯೋಜನೆಯಲ್ಲಿ ನೀವು ಒಟ್ಟು 36GB ಇಂಟರ್ನೆಟ್ ಡೇಟಾವನ್ನು ಕೂಡ ಬಳಕೆ ಮಾಡಬಹುದಾಗಿರುತ್ತದೆ.
ಒಂದು ವರ್ಷದ ಸುದೀರ್ಘ ಅವಧಿಯ ವ್ಯಾಲಿಡಿಟಿಯನ್ನು ಹೊಂದಿರುವ ಈ ಪ್ಲಾನ್ ನಲ್ಲಿ ನೀವು ಒಟ್ಟು 36 ಜಿಬಿ ಡೇಟಾವನ್ನು ಬಳಕೆ ಮಾಡಬಹುದಾಗಿರುತ್ತದೆ ಹಾಗೂ ಪ್ರತಿ ತಿಂಗಳು ಕೂಡ 300 ನಿಮಿಷಗಳ ಕರೆಯನ್ನು ನೀವು ಮಾಡಬಹುದಾಗಿರುತ್ತದೆ. ಹಾಗೂ ಈ ಯೋಜನೆಯಲ್ಲಿ ಪ್ರತಿ ತಿಂಗಳೂ ಕೂಡ 30 ಎಸ್ಎಂಎಸ್ ಗಳನ್ನು ಮಾಡುವ ಸೌಲಭ್ಯವು ಕೂಡ ಇದೆ.
ನಿಮ್ಮ ಸಿಮ್ ಕಾರ್ಡ್ ಅನ್ನು ಸಕ್ರಿಯವಾಗಿ ಇರಿಸಿಕೊಳ್ಳಲು ಇದು ಒಂದು ಉತ್ತಮವಾದ ರಿಚಾರ್ಜ್ ಪ್ಲಾನ್ ಆಗಿರುತ್ತದೆ ಹಾಗೂ ಹೆಚ್ಚಿನದಾಗಿ ಮೊಬೈಲ್ ಅನ್ನು ಬಳಸುವುದಿಲ್ಲ ಹಾಗೂ ಜಾಸ್ತಿ ಸಮಯ ಮೊಬೈಲ್ ನಲ್ಲಿ ಮಾತನಾಡುವುದಿಲ್ಲ ಮತ್ತು ಹೆಚ್ಚಿನ ಡೇಟಾವನ್ನು ಕೂಡ ಬಳಸುವುದಿಲ್ಲ ಎನ್ನುವವರಿಗೆ ಇದು ಒಂದು ಉತ್ತಮವಾದ ಪ್ಲಾನ್ ಆಗಿರುತ್ತದೆ.
ಬಿಎಸ್ಎನ್ಎಲ್ ಸಿಮ್ ಕೊಳ್ಳುವ ಮೊದಲು ನಿಮ್ಮ ಹತ್ತಿರದ ಸ್ಥಳದಲ್ಲಿ ಅಂದರೆ ನೀವು ಇರುವ ಸ್ಥಳದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಯಾವ ರೀತಿ ಇದೆ ಎಂಬುದನ್ನು ಪರಿಶೀಲಿಸಿಕೊಂಡು ನಂತರ ಬಿಎಸ್ಎನ್ಎಲ್ ಸಿಮ್ ಖರೀದಿಸುವುದು ಸೂಕ್ತ. ಏಕೆಂದರೆ ಕೆಲವೊಂದು ಪ್ರದೇಶಗಳಲ್ಲಿ ಉತ್ತಮವಾಗಿ ನೆಟ್ವರ್ಕ್ ಸಿಗದೇ ಇರಬಹುದು.