Free Borewell: ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ಉಚಿತ ಬೋರ್ವೆಲ್ ಪಡೆದುಕೊಳ್ಳಲು ರೈತರು ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳನ್ನು ಹಾಗೂ ಯಾವ ದಿನಾಂಕದ ಒಳಗಾಗಿ ಉಚಿತ ಬೋರ್ವೆಲ್ ಪಡೆದುಕೊಳ್ಳಲು ಅಥವಾ ಬೋರ್ವೆಲ್ ಅನ್ನು ಕೊರೆಸಲು ಸರ್ಕಾರದಿಂದ ಸಹಾಯಧನವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಇನ್ನು ಹೆಚ್ಚಿನ ವಿವರಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿರಿ ಅಥವಾ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ.
ಗಂಗಾ ಕಲ್ಯಾಣ ಯೋಜನೆ:
ರೈತರು ಉತ್ತಮವಾದ ಬೆಳೆಗಳನ್ನು ಬೆಳೆಯಲು ನೀರು ಒಂದು ಅವಶ್ಯಕ ಪಾತ್ರ ವಹಿಸುವ ವಸ್ತು. ದೇಶದ ಬೆನ್ನೆಲುಬು ರೈತ ಎಂದು ನಂಬಿರುವ ದೇಶ ನಮ್ಮ ಭಾರತ. ಭಾರತ ದೇಶದಲ್ಲಿ ರೈತರು ಸಂಕಷ್ಟ ಎದುರಿಸುವುದು ಕೆಲವೊಂದು ಸಮಯದಲ್ಲಿ ಅತಿಯಾದ ಬರಗಾಲದಿಂದ. ಹಾಗಾಗಿ ಸರ್ಕಾರದಿಂದ ಬೋರ್ವೆಲ್ ಕೊರೆಸಲು ರೈತರಿಗೆ ಸಹಾಯಧನವನ್ನು ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿ ರೈತರಿಗೆ ನೀಡಲಾಗುವುದು.
ಈ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ರೈತರಿಗೆ ಉಚಿತ ಬೋರ್ವೆಲ್ ಕೊರೆಸಲು ಸಹಾಯಧನವನ್ನು ಸರ್ಕಾರದ ವತಿಯಿಂದ ನೀಡಲಾಗುವುದು. 3.5 ಲಕ್ಷದ ಸಹಾಯಧನವನ್ನು ಫಲಾನುಭವಿಗಳಿಗೆ ಬೋರ್ವೆಲ್ ಕೊರೆಸಲು ನೀಡಲಾಗುವುದು. ಹಾಗೂ ಉಚಿತ ಬೋರ್ವೆಲ್ ಕೊರೆಸಲು ಬೇಕಾಗುವ ಸಂಪೂರ್ಣವಾದ ದಾಖಲೆಗಳು ಹಾಗೂ ಇನ್ನಷ್ಟು ವಿವರಗಳು ಇಲ್ಲಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಅಭ್ಯರ್ಥಿಯ ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಖಾತೆ ವಿವರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಪಹಣಿ ಮತ್ತು ಹೊಲಕ್ಕೆ ಸಂಬಂಧಿಸಿದ ದಾಖಲೆಗಳು
- ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ರೈತರ ಪ್ರಮಾಣ ಪತ್ರ
ಮೇಲೆ ಇರುವ ದಾಖಲೆಗಳನ್ನು ತೆಗೆದುಕೊಂಡು ನೀವು ಉಚಿತ ಬೋರ್ವೆಲ್ ಅನ್ನು ಪಡೆದುಕೊಳ್ಳಲು ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಮೇಲಿರುವ ದಾಖಲೆಗಳು ಅತ್ಯಗತ್ಯವಾಗಿರುತ್ತದೆ.
ಮೇಲೆ ಕೊಟ್ಟಿರುವ ದಾಖಲೆಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ರೈತರ ಪ್ರಮಾಣ ಪತ್ರವನ್ನು ನೀವು ಹೊಂದಿದ್ದಲ್ಲಿ ದೊರಕಿಸಿ ಕೊಡಬಹುದು. ಅಥವಾ ನೀವೇನಾದರೂ ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ರೈತರ ಪ್ರಮಾಣ ಪತ್ರ ಹೊಂದಿಲ್ಲದೆ ಇದ್ದಲ್ಲಿ ಅದಕ್ಕಾಗಿ ಅರ್ಜಿ ಸಲ್ಲಿಸಿ ನಂತರ ನೀವು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೆ, ನೀವೇನಾದರೂ ಉಚಿತ ಬೋರ್ವೆಲ್ ಕೊರಿಸಲು ಸರ್ಕಾರದಿಂದ ಸಹಾಯ ಧನವನ್ನು ಪಡೆಯಲು ಇಚ್ಛಿಸಿದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಬೇಕಾಗುವ ಅಧಿಕೃತ ಜಾಲತಾಣದ ಲಿಂಕನ್ನು ಈ ಕೆಳಗಡೆ ನೀಡಲಾಗಿರುತ್ತದೆ ಅದನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದು. ಹಾಗೂ ಇನ್ನಷ್ಟು ಸುಲಭವಾಗಿ ಹೇಳುವುದಾದರೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್: ಅಪ್ಲೈ ಮಾಡಿ!
ಮೇಲೆ ಕೊಟ್ಟಿರುವ ಜಾಲತಾಣವನ್ನು ಬಳಸಿಕೊಂಡು ನೀವು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸಲು ನಿಮಗೆ ಯಾವುದೇ ರೀತಿಯ ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಹಾಗೂ ಇನ್ನಷ್ಟು ಹೆಚ್ಚಿನ ವಿವರಗಳನ್ನು ತಿಳಿಯಲು ನೀವು ನಮ್ಮ ಜಾಲತಾಣದ ಚಂದದಾರರಾಗಿರಿ.