Gruhalakshmi Money: ಪೆಂಡಿಂಗ್ ಇರುವ ಗೃಹಲಕ್ಷ್ಮಿ ₹4,000/- ಹಣ ಈ ದಿನದಂದು ಮಹಿಳೆಯರ ಖಾತೆಗೆ ಜಮಾ!

Gruhalakshmi Money: ನಮಸ್ಕಾರ ಎಲ್ಲರಿಗೂ, ನಿಮಗೆಲ್ಲ ಗೊತ್ತಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳು ಪಡೆಯುತ್ತಾ ಒಂದು ವರ್ಷಕ್ಕಿಂತ ಹೆಚ್ಚಿನ ದಿನಗಳು ಆಯಿತು. ಆದರೆ ಎರಡು ಮೂರು ತಿಂಗಳಿನಿಂದ ಹಣ ಸರಿಯಾದ ಸಮಯದಲ್ಲಿ ಖಾತೆಗೆ ಜಮಾ ಆಗುತ್ತಿಲ್ಲ ಎಂಬ ಸುದ್ದಿಗಳು ಇವೆ. ಹಾಗೂ ನಿಜವು ಕೂಡ. ಗೃಹಲಕ್ಷ್ಮಿ ಯೋಜನೆಯ ಹಣವು ಇನ್ನೂ ನಾಲ್ಕು ಸಾವಿರ ರೂಪಾಯಿ ಬೆಂಡಿಂಗ್ ಇರುವ ಬಗ್ಗೆ ಹಾಗೂ ಇದರ ಬಿಡುಗಡೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಯಾಗಿರುವ ಲಕ್ಷ್ಮಿ ಹೆಬ್ಬಾಳಕರ್ ಅವರು ಮಾಹಿತಿ ಹಂಚಿಕೊಂಡಿರುತ್ತಾರೆ. 

ಕಾಂಗ್ರೆಸ್ ಸರ್ಕಾರವು ಚುನಾವಣೆಗಿಂತ ಮೊದಲು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕರ್ನಾಟಕ ರಾಜ್ಯದ ಪ್ರತಿ ಮಹಿಳೆಯು ಅಂದರೆ ಪ್ರತಿ ಮನೆಯ ಯಜಮಾನಿ ಮಹಿಳೆಯು ಈ ಯೋಜನೆ ಅಡಿಯಲ್ಲಿ 2000 ಹಣವನ್ನು ಪ್ರತಿ ತಿಂಗಳು ಕೂಡ ಪಡೆಯುತ್ತಾ ಒಂದು ವರ್ಷವನ್ನು ಕಳೆದಿದ್ದಾರೆ. 

ನಿಮಗೆಲ್ಲ ಗೊತ್ತಿರುವ ಹಾಗೆ, ಎಲ್ಲ ಮಹಿಳೆಯರಿಗೆ ಸುಮಾರು 11 ಕಂತಿನವರೆಗೆ ಹಣ ಜಮಾ ಆಗಿದೆ ಎಂದು ಹೇಳಬಹುದು. ಇನ್ನು ಉಳಿದ 12 ಮತ್ತು 13ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ಯಾವಾಗ ಫಲಾನುಭವಿಗಳ ಖಾತೆಗೆ ಸೇರಲಿದೆ ಎಂಬ ಮಾಹಿತಿಯನ್ನು ತಿಳಿಯಲು ಜನರು ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು. 

ಗೃಹಲಕ್ಷ್ಮಿ (Gruhalakshmi Money) ಹಣದ ಬಗ್ಗೆ ಸಚಿವೆ ಹೊಸ ಅಪ್ಡೇಟ್:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಅವರು ಗೃಹಲಕ್ಷ್ಮಿ ಯೋಜನೆಯ 12ನೇ ಮತ್ತು 13ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಒಂದು ಮಹತ್ತರವಾದ ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ. ಈಗಾಗಲೇ 11 ಕಂತುಗಳವರೆಗೆ ಹಣವು ಜಮಾ ಆಗಿದ್ದು ಇನ್ನು ಕೆಲವೇ ದಿನಗಳ ಸಮಯದಲ್ಲಿ ಮಹಿಳೆಯರಿಗೆ ಪೆಂಡಿಂಗ್ ಇರುವ ಎಲ್ಲಾ ಹಣವು ಜಮಾ ಆಗಲಿದೆ ಎಂದು ಹೇಳಿರುತ್ತಾರೆ. 

ಕೆಲವು ಪೆಂಡಿಂಗ್ ಇರುವ ಮಹಿಳೆಯರಿಗೆ 11ನೇ ಕಂತಿನ ಹಣ ಬಿಡುಗಡೆಯಾದ ಬಳಿಕ 12ನೇ ಕಂತಿನ ಹಣವನ್ನು ಸೆಪ್ಟಂಬರ್ ತಿಂಗಳಿನ ಮೊದಲನೇ ಅಥವಾ ಎರಡನೇ ವಾರದ ನಂತರ ಜಮಾ ಮಾಡಲಾಗುವುದು ಎಂದು ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ. 

ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ಪ್ಲೇ ಸ್ಟೋರ್ ನಿಂದ ಡಿ ಬಿ ಟಿ ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ಪಡೆದುಕೊಂಡು ಅದರಲ್ಲಿ ನೀವು ನಿಮ್ಮ ಫಲಾನುಭವಿಯ ಪೂರ್ತಿ ವಿವರಗಳನ್ನು ಹಾಕುವ ಮೂಲಕ ಹಣವನ್ನು ಪರಿಶೀಲಿಸಿಕೊಳ್ಳಬಹುದು.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!