Gruhalakshmi Money: ನಮಸ್ಕಾರ ಎಲ್ಲರಿಗೂ, ಸಾಕಷ್ಟು ಜನ ಗೃಹಲಕ್ಷ್ಮಿ ಯೋಜನೆಯ 10 ಮತ್ತು 11 ಕಂತುಗಳ ವರೆಗೆ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಕೆಲವು ದಿನಗಳಿಂದ 3-4 ಕಂತುಗಳ ಪೆಂಡಿಂಗ್ ಹಣ ಏನಾದರೂ ಬರದೆ ಇದ್ದರೆ ಅಂತವರಿಗೆ ಸರ್ಕಾರವು ಒಂದು ಶಾಕಿಂಗ್ ನ್ಯೂಸ್ ಅನ್ನು ಕೊಟ್ಟಿರುತ್ತದೆ. ಅದೇನಂಬುವುದನ್ನು ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ನಿಮಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಗೃಹಲಕ್ಷ್ಮಿ ಯೋಜನೆ ಹಣ:
ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ 10 ರಿಂದ 11 ನೇ ಕಂತಿನವರೆಗೆ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಕೂಡ ₹2,000 ರೂಪಾಯಿ ಹಣವನ್ನು ಪಡೆದುಕೊಂಡಿರುತ್ತಾರೆ ಎಂದು ಹೇಳಬಹುದು. ಆದರೆ ಕೆಲವು ಮಹಿಳೆಯರಿಗೆ ಕಳೆದ ಮೂರು ನಾಲ್ಕು ಕಂತುಗಳು ಹಣಗಳು ಜಮಾ ಆಗಿರುವುದಿಲ್ಲ ಕಾರಣ ಏನೆಂಬುದನ್ನು ತಿಳಿಯಲು ನೀವು ಕೊನೆವರೆಗೂ ಓದಿ.
ಈ ವಿಷಯವಾಗಿ ಮಾತನಾಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಇನ್ನು ಎರಡು ಮೂರು ದಿನಗಳಲ್ಲಿ ಹಣ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ. ಅಥವಾ ಒಂದು ವಾರದ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿರುತ್ತಾರೆ. ಯಾವುದು ಒಂದು ತಾಂತ್ರಿಕ ದೋಷದಿಂದ ಹಣ ಜಮಾ ಆಗದೇ ಇರಬಹುದು ಆದರೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸ್ವಲ್ಪ ಕಾಯ್ದು ಹಣ ಪಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು 2 ಲಕ್ಷ ಮಹಿಳೆಯರಿಗೆ ₹2,000 ಹಣ ಸಿಗಲ್ಲ:
ನಿಮಗೆಲ್ಲ ಗೊತ್ತಿರುವ ಹಾಗೆ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸರಿ ಸುಮಾರು 1.28 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿರುತ್ತಾರೆ. ಇಲ್ಲಿಯವರೆಗೂ ಕೂಡ ಮಹಿಳೆಯರು 11ನೇ ಕಂತಿನವರೆಗೆ ಹಣವನ್ನು ಪಡೆದುಕೊಂಡಿರುವುದು ನಿಮಗೆಲ್ಲ ಗೊತ್ತಿದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ 2 ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳನ್ನು ಕೈ ಬಿಡಲಾಗಿದೆ ಎಂದು ತಿಳಿಸಲಾಗಿದೆ.
ಕಾರಣವೇನೆಂದರೆ 2 ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು IT ಮತ್ತು GST ಅನ್ನು ಪಾವತಿ ಮಾಡುತ್ತಿದ್ದಾರೆ ಎಂದು ಗುರುತಿಸಲ್ಪಟ್ಟಿದ್ದಾರೆ. ಅಂಥವರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿರುವ ಲಕ್ಷ್ಮಿ ಹೆಬ್ಬಾಳಕರ್ ಅವರು ತಿಳಿಸಿರುತ್ತಾರೆ.
ಹಾಗಾದರೆ, ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬೇಕು ಯಾರಿಗೆ ಹಣ ಜಮಾ ಆಗಲಿದೆ ಅಥವಾ ಯಾರಿಗೆ ಹಣ ಜಮಾ ಆಗುವುದಿಲ್ಲ ಎಂದು ತಿಳಿದುಕೊಳ್ಳಲು ನೀವು ಈ ಕೆಲಸ ಮಾಡಿ. ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ನಿಮ್ಮ ಅರ್ಜಿ ಸ್ಥಿತಿ ಚಾಲ್ತಿಯಲ್ಲಿದೆಯೋ ಅಥವಾ ಇಲ್ಲವಾ ಎಂದು ಖಚಿತಪಡಿಸಿಕೊಳ್ಳಿ. ನಾಲ್ಕರಿಂದ ಐದು ಕಂತುಗಳ ಹಣವು ನಿಮಗೆ ಏನಾದರೂ ಜಮಾ ಆಗಿಲ್ಲ ಅಂತ ಅಂದರೆ ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಿ. ಏಕೆಂದರೆ ಹಲವಾರು ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳು ರಿಜೆಕ್ಟ್ ಆಗಿರುತ್ತವೆ.