Gruhalakshmi Money Check: ನಮಸ್ಕಾರ ಎಲ್ಲರಿಗೂ, ನೀವೇನಾದರೂ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆಯಾ ಇಲ್ಲವಾ ಎಂದು ತಿಳಿದುಕೊಳ್ಳಬೇಕಾ? ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿರುತ್ತದೆ. ಆದ್ದರಿಂದ ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ತಿಳಿಯುತ್ತದೆ.
ಸ್ನೇಹಿತರೆ ಕಾಂಗ್ರೆಸ್ ಸರ್ಕಾರವು ನೀಡಿರುವ 5 ಗ್ಯಾರಂಟಿಗಳಲ್ಲಿ ಒಂದಾಗಿರುವಂತಹ ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವಂತಹ ಗೃಹಲಕ್ಷ್ಮಿ ಯೋಜನೆಯ ವತಿಯಿಂದ ಪ್ರತಿ ತಿಂಗಳು ಕೂಡ 2000 ರೂಪಾಯಿ ಹಣವನ್ನು ಇದುವರೆಗೆ 11 ತಿಂಗಳ ಹಣವನ್ನು ಮಹಿಳೆಯರು ಪಡೆದುಕೊಂಡಿರುತ್ತಾರೆ. ಅಂದರೆ 22 ಸಾವಿರ ರೂಪಾಯಿ ಹಣವನ್ನು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಪಡೆದುಕೊಂಡಿರುತ್ತಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ಏನಾದರು ನಿಮ್ಮ ಖಾತೆಗೆ ಬಂದಿದೆಯಾ? ಇಲ್ಲವಾ ಎಂದು ತಿಳಿದುಕೊಳ್ಳಲು ನೀವು ಸುಲಭವಾಗಿಗಳನ್ನು ಅನುಸರಿಸಬಹುದಾಗಿರುತ್ತದೆ. ನಿಮ್ಮ ಬಳಿ ಸ್ಮಾರ್ಟ್ಫೋನ್ ಇದ್ದರೆ ಅದರಲ್ಲಿ “ಡಿಬಿಟಿ ಕರ್ನಾಟಕ” ಎಂಬ ಅಪ್ಲಿಕೇಶನ್ ಅನ್ನು ಪಡೆದುಕೊಳ್ಳುವ ಮೂಲಕ ಹಣವನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.
ಗೃಹಲಕ್ಷ್ಮಿ ಹಣ ಹೇಗೆ ಚೆಕ್ ಮಾಡಿಕೊಳ್ಳಬೇಕು?
ಡಿಪಿಟಿ ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ಪಡೆದುಕೊಂಡ ಮೂಲಕ ನೀವು ಆಧಾರ್ ಕಾರ್ಡ್ ನಂಬರ್ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್ ಗೆ ಬರುವ ಓಟಿಪಿಯನ್ನು ನಮೂದಿಸಿ ಲಾಗಿನ್ ಆಗಿ. ಒಟಿಪಿಯನ್ನು ನಮೂದಿಸಿದ ನಂತರ ಫಲಾನುಭವಿಯ ಸಂಪೂರ್ಣ ವಿವರ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ ಎಲ್ಲವೂ ಸರಿ ಇದ್ದಲ್ಲಿ ಓಕೆ ಎಂದು ಮುಂದುವರೆಯಿರಿ.
ನಂತರ ನೀವು ನಿಮ್ಮ ಎಂಪಿನ್ ಕ್ರಿಯೇಟ್ ಮಾಡಿಕೊಳ್ಳುವ ಮೂಲಕ ಎಂಪಿನ್ ಹಾಕಿ ಸೆಕ್ಯೂರ್ ಆಗಿ ಲಾಗಿನ್ ಆಗಬೇಕಾಗುತ್ತದೆ. ನಂತರ ಫಲಾನುಭವಿಯನ್ನು ಆಯ್ಕೆ ಮಾಡಿಕೊಂಡು ಎಂಪಿನ್ ಅನ್ನು ಹಾಕಿ. ಪೇಮೆಂಟ್ ಸ್ಟೇಟಸ್ ಎಂಬ ಆಪ್ಷನ್ ಅನ್ನು ಒತ್ತಿ ಮುಂದುವರೆದಾಗ ನೀವು ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಎಂಬ ಎರಡು ಆಪ್ಷನ್ ಗಳನ್ನು ಕಾಣಿಸಿಕೊಳ್ಳುತ್ತವೆ ಅದರಲ್ಲಿ ನೀವು ಗೃಹಲಕ್ಷ್ಮಿ ಯೋಜನೆಯ ಹಣ ಚೆಕ್ ಮಾಡಿಕೊಳ್ಳಬೇಕಾದರೆ ಗೃಹಲಕ್ಷ್ಮಿ ಆಯ್ಕೆಯ ಮೇಲೆ ಒತ್ತಿರಿ.
ನಂತರ ಯಾವ ದಿನದಂದು ಗೃಹಲಕ್ಷ್ಮಿ ಹಣ ಜಮಾ ಆಗಿರುತ್ತದೆ ಎಂಬ ಸ್ಟೇಟಸ್ ನಿಮ್ಮ ಎದುರಿಗೆ ಕಾಣಿಸಿಕೊಳ್ಳುತ್ತದೆ. ಈ ರೀತಿಯಾಗಿ ಸುಲಭವಾಗಿ ನೀವು ಗೃಹಲಕ್ಷ್ಮಿ ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳಬಹುದಾಗಿರುತ್ತದೆ. ಇದೇ ರೀತಿ ಹೆಚ್ಚಿನ ಸುದ್ದಿಗಳಿಗಾಗಿ ನೀವು ನಮ್ಮ ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಬಹುದು.