New Ration Card Applications: ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಜನತೆಗೆ ತಿಳಿಸುವ ವಿಷಯವೇನೆಂದರೆ, ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿ ಮಾಡಿಸಲು ಕಾಯುತ್ತಿರುವ ಜನರಿಗೆ ಈ ಲೇಖನದ ಮೂಲಕ ಸ್ಪಷ್ಟನೆಯನ್ನು ನೀಡಲಾಗುತ್ತದೆ. ಹಲವಾರು ಜನರು ಹೊಸ ರೇಷನ್ ಕಾರ್ಡ್ ಬಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಕಾತುರದಿಂದ ಕಾಯುತ್ತಿದ್ದಾರೆ. ಸಂಪೂರ್ಣವಾದ ಮಾಹಿತಿ ತಿಳಿಯಲು ಬಯಸಿದರೆ, ಲೇಖನವನ್ನು ಕೊನೆಯವರೆಗೂ ಓದಿ.
ಹೌದು ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ ಕರ್ನಾಟಕ ರಾಜ್ಯ ಸರ್ಕಾರವು ನೀಡುತ್ತಿರುವ ಗ್ಯಾರಂಟಿಗಳ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಒಂದು ಅತ್ಯಗತ್ಯವಾದ ದಾಖಲೆಯಾಗಿರುತ್ತದೆ. ಅದನ್ನು ಬಳಸಿಕೊಂಡು ನೀವು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವತಿಯಿಂದ ಇರುವ ಯೋಜನೆಗಳ ಲಾಭವನ್ನು ಪಡೆಯಬಹುದಾಗಿರುತ್ತದೆ. ಆದ್ದರಿಂದ ಹಲವಾರು ಜನ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮತ್ತು ರೇಷನ್ ಕಾರ್ಡಿನಲ್ಲಿರುವಂತಹ ದೋಷಗಳನ್ನು ಸರಿಪಡಿಸಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ:
ಸ್ನೇಹಿತರೆ, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗ ನಿಂದ ಹಿಡಿದು ಇಲ್ಲಿಯವರೆಗೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅಥವಾ ತಿದ್ದುಪಡಿ ಮಾಡಿಸಲು ಇಂಥದ್ದೇ ದಿನಾಂಕ ಎಂದು ನಿಗದಿಪಡಿಸಲಾಗಿಲ್ಲ. ಆದ್ದರಿಂದ ನಿಮಗೆ ತಿಳಿಸ ಬಯಸುವ ವಿಷಯವೆಂದರೆ, ಹೊಸ ರೇಷನ್ ಕಾರ್ಡುಗಳಿಗೆ ತಿಂಗಳಿನಲ್ಲಿ ಯಾವ ದಿನ ಬೇಕಾದರೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿ ಮಾಡಿಸಲು ಅವಕಾಶವನ್ನು ಕೊಡಬಹುದಾಗಿದೆ.
ಹಾಗಾಗಿ ಹೊಸ ರೇಷನ್ ಕಾರ್ಡ್ ಗಳಿಗೆ ನೀವೇನಾದರೂ ಅರ್ಜಿ ಸಲ್ಲಿಸಲು ಬಯಸಿದರೆ ಮತ್ತು ತಿದ್ದುಪಡಿ ಮಾಡಿಸುವ ಅವಶ್ಯಕತೆ ಇದ್ದರೆ ಕಾಯಬೇಕಾಗುತ್ತದೆ. ಯಾಕೆಂದರೆ, ತಿಂಗಳಿನಲ್ಲಿ ಮುನ್ಸೂಚನೆ ನೀಡದೆ ಯಾವ ದಿನ ಬೇಕಾದರೂ ಅವಕಾಶವನ್ನು ನೀಡಬಹುದಾಗಿದೆ. ಆದ್ದರಿಂದ ನಿಮ್ಮ ಹತ್ತಿರವಿರುವ ಗ್ರಾಮಒನ್ ಕರ್ನಾಟಕಒನ್ ಹಾಗೂ ಇನ್ನಿತರ ಸಾಮಾನ್ಯ ಸೇವಕ ಕೇಂದ್ರಗಳಿಗೆ ಭೇಟಿ ನೀಡಿ ಸಂಪರ್ಕದಲ್ಲಿರಿ.
ಹೊಸ ರೇಷನ್ ಕಾರ್ಡ್ ಒಳಗೆ ಮತ್ತು ತಿದ್ದುಪಡಿ ಮಾಡಿಸಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತವೆ ಎಂಬುವುದನ್ನು ಈ ಕೆಳಗೆ ನೀವು ನೋಡಿಕೊಳ್ಳಬಹುದು. ಹೊಸ ರೇಷನ್ ಕಾರ್ಡ್ ಗಳಿಗೆ ಮತ್ತು ತಿದ್ದುಪಡಿಗೆ ಅವಕಾಶ ಕೊಟ್ಟ ತಕ್ಷಣ ಈ ಕೆಳಗಿನ ನೀಡಿರುವ ದಾಖಲೆಗಳನ್ನು ನೀವು ಕಡ್ಡಾಯವಾಗಿ ಒದಗಿಸುವ ಮೂಲಕ ನಿಮ್ಮ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಕೆಲಸವನ್ನು ಮಾಡಿಕೊಳ್ಳಬಹುದಾಗಿರುತ್ತದೆ.
ಹೊಸ ರೇಷನ್ ಕಾರ್ಡ್ ಗೆ ಬೇಕಾಗುವ ದಾಖಲೆಗಳು:
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಕುಟುಂಬದ ಎಲ್ಲಾ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬಯೋಮೆಟ್ರಿಕ್
- ಜನನ ಪ್ರಮಾಣ ಪತ್ರ (ಆರು ವರ್ಷದೊಳಗಿನ ಮಕ್ಕಳಿದ್ದರೆ ಮಾತ್ರ ಅನ್ವಯಿಸುತ್ತದೆ)
- ಮೊಬೈಲ್ ನಂಬರ್
ಮೇಲೆ ನೀಡಿರುವ ದಾಖಲೆಗಳನ್ನು ತೆಗೆದುಕೊಂಡು ಸಿದ್ಧವಾಗಿ ಇಡಿ. ಯಾಕೆಂದರೆ, ತಿಂಗಳಲ್ಲಿ ಯಾವ ದಿನವಾದರೂ ಕೂಡ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿಯಾಗಲಿ ಅಥವಾ ತಿದ್ದುಪಡಿಗೆ ಅವಕಾಶವಾಗಲಿ ಕೊಡಬಹುದಾಗಿರುತ್ತದೆ.
ನೆನಪಿನಲ್ಲಿಡಬೇಕಾದ ಅಂಶವೆಂದರೆ, ಈ ಪ್ರಕ್ರಿಯೆಗೆ ಯಾವುದೇ ದಿನಾಂಕವನ್ನು ನಿಗದಿಪಡಿಸಲಾಗಿರುವುದಿಲ್ಲ. ಒಂದು ವೇಳೆ ಇಂತಹದ್ದೆ ದಿನಾಂಕವೆಂದು ಖಾಸಗಿ ಮಾಧ್ಯಮಗಳು ಹಾಗೂ ಇನ್ನಿತರ ಸುಳ್ಳು ಸುದ್ದಿಯನ್ನು ನೀಡುವಂತಹ ವದಂತಿಗಳನ್ನು ನಂಬಬೇಡಿ. ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟ ತಕ್ಷಣ ನಮ್ಮ ಜಾಲತಾಣದ ಮೂಲಕ ನಿಮಗೆ ತಿಳಿಸಲಾಗುವುದು. ಆದ್ದರಿಂದ ನೀವು ನಮ್ಮ ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿರಿ.