New Ration Card: ನಮಸ್ಕಾರ ಕರ್ನಾಟಕದ ಜನತೆ, ರಾಜ್ಯ ಸರ್ಕಾರವು ನೀಡಿರುವ ಗ್ಯಾರಂಟಿಗಳ ಲಾಭವನ್ನು ರಾಜ್ಯದ ಜನತೆಯು ಪಡೆಯಬೇಕಾದರೆ ರೇಷನ್ ಕಾರ್ಡ್ ಒಂದು ಅನಿವಾರ್ಯ ದಾಖಲೆಯಾಗಿರುತ್ತದೆ. ಹಾಗಾಗಿ ರೇಷನ್ ಕಾರ್ಡುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಮತ್ತು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಗಳನ್ನು ಸಲ್ಲಿಸಲು ಹಲವಾರು ಜನ ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈ ಲೇಖನದಲ್ಲಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮತ್ತು ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಸಿಕೊಳ್ಳಲು ತಿದ್ದುಪಡಿಗೆ ಯಾವಾಗ ಅವಕಾಶ ಕಲ್ಪಿಸಿಕೊಡಲಾಗುವುದು? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿರುತ್ತದೆ. ಆದಕಾರಣ ಆಸಕ್ತಿ ಇರುವಂತಹ & ಅವಶ್ಯಕತೆ ಇರುವಂತವರು ಲೇಖನವನ್ನು ಕೊನೆಯವರೆಗೂ ಓದಿ.
ಹೊಸ ರೇಷನ್ ಕಾರ್ಡ್ ಅರ್ಜಿ ಅರ್ಜಿಗಳು ಯಾವಾಗ ಆರಂಭ?
ನೀವೇನಾದರೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಬೇಕೆಂದು ಬಯಸಿದರೆ ಇಲ್ಲಿದೆ ಒಂದು ಸರಿಯಾದ ಮಾಹಿತಿ, ತಿದ್ದುಪಡಿ ಮಾಡಿಸಲು ಮತ್ತು ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಸರ್ಕಾರವು ತಿಂಗಳಿನಲ್ಲಿ ಯಾವುದೇ ರೀತಿಯ ನಿಗದಿತ ದಿನಾಂಕವನ್ನು ಗುರುತಿಸಿರುವುದಿಲ್ಲ. ಸೆಪ್ಟೆಂಬರ್ 15ರಿಂದ 30ನೇ ತಾರೀಖಿನ ಒಳಗಾಗಿ ಯಾವುದಾದರೂ ಒಂದು ದಿನ ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಅವಕಾಶ ಕೊಡಬಹುದು ಎಂಬ ಊಹಾಪೋಹಗಳಿದ್ದವು.
ಆದರೆ ಇಲ್ಲಿಯವರೆಗೆ ಹೊಸ ರೇಷನ್ ಕಾರ್ಡ್ ಗಳಿಗೆ ಆಗಲಿ ಮತ್ತು ತಿದ್ದುಪಡಿಗೆ ಆಗಲಿ ಅವಕಾಶವನ್ನು ಕಲ್ಪಿಸಿಕೊಡಲಾಗಿಲ್ಲ. ಹಾಗಾಗಿ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಅಥವಾ ಇನ್ನು ಎರಡು ಮೂರು ದಿನದಲ್ಲಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಅವಕಾಶವನ್ನು ಕೊಡಬಹುದಾದ ಸಾಧ್ಯತೆಗಳಿರುತ್ತವೆ ಎಂದು ಹೇಳಬಹುದಾಗಿರುತ್ತದೆ.
ಹೊಸ ರೇಷನ್ ಕಾರ್ಡು ಅರ್ಜಿಗೆ ಬೇಕಾಗುವ ದಾಖಲೆಗಳು:
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಕುಟುಂಬದ ಯಜಮಾನರ ಆಧಾರ್ ಕಾರ್ಡ್
- ಕುಟುಂಬದ ಎಲ್ಲಾ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ಆರು ವರ್ಷದ ಒಳಗಿರುವ ಮಕ್ಕಳಿದ್ದಲ್ಲಿ ಜನನ ಪ್ರಮಾಣ ಪತ್ರ.
- ಬಯೋಮೆಟ್ರಿಕ್ ಅವಶ್ಯಕತೆ ಇರುತ್ತದೆ.
- ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್.
ಈ ಮೇಲಿನ ದಾಖಲೆಗಳನ್ನು ಬಳಸಿಕೊಂಡು ನೀವು ಹೊಸ ರೇಷನ್ ಕಾರ್ಡ್ ಗಳಿಗೆ ಸರ್ಕಾರವು ಅವಕಾಶವನ್ನು ಕೊಟ್ಟಾಗ ಬಳಸಿಕೊಂಡು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಆದರೆ ನೆನಪಿನಲ್ಲಿಡಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ದಿನಾಂಕವನ್ನು ನಿಗದಿಪಡಿಸಲಾಗಿರುವುದಿಲ್ಲ. ತಿಂಗಳಿನ ಯಾವ ದಿನದಲ್ಲಿ ಬೇಕಾದರೂ ಇದಕ್ಕೆ ಹೇಳದೆ ಕೇಳದೆ ಅವಕಾಶವನ್ನು ಕೊಡಬಹುದಾಗಿರುತ್ತದೆ.