PhonePe Loan: ನಮಸ್ಕಾರ ಎಲ್ಲರಿಗೂ, ನೀವೇನಾದರೂ ಫೋನ್ ಪೇ ಅಪ್ಲಿಕೇಶನ್ ಬಳಸುತ್ತಿದ್ದರೆ, ಫೋನ್ ಪೇ ನಲ್ಲಿ ನೀವು ಸಾಲವನ್ನು ಪಡೆಯಬಹುದು ಎಂದರೆ ನಂಬುತ್ತೀರಾ? ಹೌದು ಸ್ನೇಹಿತರೆ, ನೀವು ಫೋನ್ ಪೇ ಅಪ್ಲಿಕೇಶನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿರುತ್ತದೆ. ಯಾವ ರೀತಿ ಸಾಲವನ್ನು ಪಡೆಯಬೇಕು ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿರುತ್ತದೆ. ಆದ್ದರಿಂದ ಕೊನೆಯವರೆಗೂ ಓದಿ.
ಫೋನ್ ಪೇ ಸಾಲ: (PhonePe Loan)
ನೀವು ಫೋನ್ ಪೇ ಮೂಲಕ 10,000 ದಿಂದ ಹಿಡಿದು 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಯಾವುವು? ಮತ್ತು ಯಾವ ರೀತಿ ಅರ್ಜಿ ಸಲ್ಲಿಸಬೇಕು? ಎಂಬುದರ ಸಂಪೂರ್ಣ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಸರಿಯಾಗಿ ಉತ್ತರಿಸಲಾಗುತ್ತದೆ.
ಸಾಲ ಪಡೆಯಲು ಅರ್ಹತೆಗಳು:
- ಫೋನ್ ಪೇ ನಲ್ಲಿ ಸಾಲ ಪಡೆಯಲು 21 ವರ್ಷ ಮೇಲ್ಪಟ್ಟವರಾಗಿರಬೇಕು ಹಾಗೂ 49 ವರ್ಷ ಮೀರಿರಬಾರದು.
- ಫೋನ್ ಪೇ ನಲ್ಲಿ ಸಾಲ ಪಡೆಯಲು ಆದಾಯದ ಪುರಾವೆಗಳನ್ನು ಒದಗಿಸಬೇಕು ಹಾಗೂ ಪ್ರತಿ ತಿಂಗಳಿಗೆ 15,000 ಆದಾಯ ಇರಬೇಕು.
- ಫೋನ್ ಪೇ ಅಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು. ಉದಾಹರಣೆಗೆ, 650 ರಿಂದ 900 ಮಧ್ಯದಲ್ಲಿ ಸಿಬಿಲ್ ಸ್ಕೋರನ್ನು ಹೊಂದಿರಬೇಕು.
ಸಾಲ ಪಡೆಯಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ವೋಟರ್ ಐಡಿ
- ಮೊಬೈಲ್ ನಂಬರ್
- ಪಾನ್ ಕಾರ್ಡ್
- ಆದಾಯದ ಪುರಾವೆ
- ಉದ್ಯೋಗ ಸಂಬಂಧಿತ ದಾಖಲೆಗಳು
ಮೇಲಿರುವ ದಾಖಲೆಗಳನ್ನು ನೀಡಿದರೆ ನೀವು ಫೋನ್ ಪೇ ಮೂಲಕ ಸಾಲವನ್ನು ಸುಲಭವಾಗಿ ಪಡೆಯಬಹುದಾಗಿರುತ್ತದೆ. ನೆನಪಿನಲ್ಲಿಡಿ ಉತ್ತಮವಾದ ಸಿಬಿಲ್ ಸ್ಕೋರ್ ಇದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರಕುವ ಸಾಧ್ಯತೆ ಇರುತ್ತದೆ.
ಸಾಲ ಪಡೆಯುವುದು ಹೇಗೆ?
ನೀವು ಫೋನ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಅಪ್ಲಿಕೇಶನ್ ಹೊಂದಿರಬೇಕಾಗುತ್ತದೆ. ಅಪ್ಲಿಕೇಶನ್ ನಲ್ಲಿ ಮೊಬೈಲ್ ನಂಬರ್ ಹಾಗೂ ಓಟಿಪಿಯನ್ನು ಹಾಕುವ ಮೂಲಕ ರಿಜಿಸ್ಟರ್ ಆಗಿರಿ.
ಫೋನ್ ಪೇ ಅಪ್ಲಿಕೇಶನ್ ಓಪನ್ ಮಾಡಿಕೊಂಡು ತಕ್ಷಣ ನಿಮಗೆ ಕಾಣಿಸುವ ಆಪ್ಷನ್ಗಳಲ್ಲಿ ಕೆಳಗಡೆ ಎರಡನೇ ಸ್ಥಾನದಲ್ಲಿ ಲೋನ್ ಎಂಬ ಆಪ್ಷನ್ ಅನ್ನು ನೀವು ಕಾಣುತ್ತೀರಾ. ನೀವು ಲೋನ್ ಸೆಕ್ಷನ್ ಒಳಗಡೆ ಭೇಟಿ ನೀಡಿದಾಗ ನಿಮಗೆ ಹಲವಾರು ತರಹದ ಸಾಲಗಳು ಕಾಣಿಸಿಕೊಳ್ಳುತ್ತವೆ.
ನೀವು ನಿಮ್ಮ ಬೇಕಾಗುವ ದಾಖಲೆಗಳನ್ನು ಒದಗಿಸುವ ಮೂಲಕ ಹಾಗೂ ನಿಮ್ಮ ಸಂಪೂರ್ಣ ದ ವಿಳಾಸವನ್ನು ಒದಗಿಸುವ ಮೂಲಕ ಕೇಳಲಾಗಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಫೋನ್ ಪೇ ಮೂಲಕ ಸಾಲವನ್ನು ಪಡೆಯಬಹುದಾಗಿರುತ್ತದೆ.
ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಮೊಬೈಲ್ ಕ್ಯಾಮೆರಾ ಆಕ್ಸಸ್ ಈ ಕೆವೈಸಿ ಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಅರ್ಜಿ ವೆರಿಫೈ ಆದ ನಂತರ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.