PhonePe Personal Loan: ರಾಜ್ಯದ ಜನತೆಗೆಲ್ಲ ನಮಸ್ಕಾರ, ಈ ಲೇಖನದಲ್ಲಿ ಫೋನ್ ಪೇ ಮೂಲಕ 10,000 ದಿಂದ 5 ಲಕ್ಷದವರೆಗೆ ನೀವು ಫೋನ್ ಪೇ ಮೂಲಕ ವೈಯಕ್ತಿಕ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆಯಬೇಕೆಂದು ಬಯಸಿದರೆ, ಈ ಲೇಖನವನ್ನು ಕೊನೆಯವರೆಗೂ ಓದಿ. ಬೇಕಾಗುವ ದಾಖಲೆಗಳು ಮತ್ತು ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣವಾದ ವಿವರವನ್ನು ನೀಡಲಾಗಿದೆ.
ಫೋನ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸುವಂತಹ ವ್ಯಕ್ತಿಗಳು ಈ ಕೆಳಗೆ ಬೇಕಾಗುವ ಅರ್ಹತೆ ಹಾಗೂ ಅಗತ್ಯ ಬೀಳುವ ಎಲ್ಲಾ ದಾಖಲೆಗಳ ಬಗ್ಗೆ ವಿವರವನ್ನು ನೀಡಲಾಗಿರುತ್ತದೆ. ಹಾಗಾಗಿ ಸಾಲ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗುತ್ತದೆ.
ಫೋನ್ ಪೇ ಸಾಲಕ್ಕೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆದಾಯದ ಪುರಾವೆ
- ಮೊಬೈಲ್ ನಂಬರ್
- ವೋಟರ್ ಐಡಿ
- ಕೇಳಲಾಗುವ ಇನ್ನಿತರ ದಾಖಲೆಗಳು
ಸಾಲ ಪಡೆಯಲು ಅರ್ಹತೆಗಳು:
ಫೋನ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸುವಂತಹ ವ್ಯಕ್ತಿಯು ಸಕ್ರಿಯ ಫೋನ್ ಪೇ ಬಳಕೆದಾರನಾಗಿರಬೇಕು.
ಸಾಲ ಪಡೆಯಲು ಬಯಸುವ ವ್ಯಕ್ತಿಯು 21 ವರ್ಷ ಮೇಲ್ಪಟ್ಟ 49 ವರ್ಷ ಮೀರಿರಬಾರದು ಎಂದು ತಿಳಿಸಲಾಗಿದೆ.
ಫೋನ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸುವ ವ್ಯಕ್ತಿಯು ಉತ್ತಮವಾದ ಸಿಬಿಲ್ ಸ್ಕೋರನ್ನು ಹೊಂದಿರಬೇಕು. ಉದಾಹರಣೆಗೆ, 60 ರಿಂದ ಮೇಲ್ಪಟ್ಟ ಸಿಬಿಲ್ ಸ್ಕೋರನ್ನು ಹೊಂದಿದ್ದರೆ ಉತ್ತಮ.
ಸಾಲ ಪಡೆಯುವುದು ಹೇಗೆ?
ನೀವು ಫೋನ್ ಪೇ ಬಳಕೆದಾರರಾಗಿದ್ದರೆ ಕೆಳಗಡೆ ನೀಡಿರುವಂತಹ ಮೆನುಬಾರ್ ನಲ್ಲಿ ಸಾಲದ ಸೆಕ್ಷನ್ಗೆ ಭೇಟಿ ನೀಡಿ. ಈ ವಿಭಾಗದಲ್ಲಿ ಹಲವಾರು ಸಾಲಗಳ ವಿಧಗಳನ್ನು ನೀವು ಕಾಣುತ್ತೀರಾ. ಅವುಗಳಲ್ಲಿ ನಿಮಗೆ ಅವಶ್ಯಕತೆ ಇರುವ ಸಾಲವನ್ನು ಆಯ್ದುಕೊಳ್ಳಿ.
ನಂತರ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಹಾಗೂ ಇನ್ನಷ್ಟು ಹೆಚ್ಚಿನ ವೈಯಕ್ತಿಕ ವಿವರಗಳನ್ನು ನೀಡುವ ಮೂಲಕ ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಸಾಲಕ್ಕೆ ಅರ್ಜಿ ಸಲ್ಲಿಸಿದ ನಂತರ ಮೊಬೈಲ್ ಕ್ಯಾಮೆರಾ ಮೂಲಕ ಕೆವೈಸಿಯನ್ನು ಪೂರ್ಣಗೊಳಿಸಲಾಗುತ್ತದೆ. ನಂತರ ಸಾಲದ ಅನುಮೋದನೆಯ ನಂತರ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು ಎಂದು ತಿಳಿದುಬಂದಿರುತ್ತದೆ.