PM Kisan 2000 Amount: ನಮಸ್ಕಾರ ಎಲ್ಲರಿಗೂ, ನಾಳೆ ಅಂದರೆ ಅಕ್ಟೋಬರ್ 5 ನೇ ತಾರೀಕು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಹಣ ಜವ ಆಗಲಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ. ರೂ.2000 ಹಣ ಜಮಾ ಆಗಲು ಈ ಕೆಲಸವನ್ನು ನೀವು ಮಾಡಬೇಕಾಗುತ್ತದೆ. ಅದೇನೆಂಬುದನ್ನು ತಿಳಿಯಲು ಕೊನೆಯವರೆಗೂ ಓದಿ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ:
ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿರುವಂತಹ ರೈತರು ವರ್ಷಕ್ಕೆ 6000 ರೂಪಾಯಿಯನ್ನು 4 ತಿಂಗಳಿಗೊಮ್ಮೆ 2000 ರೂಪಾಯಿಯಂತೆ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಪಡೆಯುತ್ತಾರೆ. ಈ ಯೋಜನೆಯ ಹಣ ನಾಳೆ ಜಮಾ ಆಗಲಿರುವ ಬಗ್ಗೆ ಈ ಕೆಳಗಡೆ ಮಾಹಿತಿಯನ್ನು ನೀಡಲಾಗಿದೆ.
ಈ ಯೋಜನೆಯ 18ನೇ ಕಂತಿನ ಹಣವನ್ನು ಅಕ್ಟೋಬರ್ 5 ನೇ ತಾರೀಕು ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲು ಸರ್ಕಾರವು ಮುಂದಾಗಿರುತ್ತದೆ. ಸಾವಿರ ರೂಪಾಯಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವೋ ಅಕ್ಟೋಬರ್ 5 2024 ಈ ದಿನಾಂಕದಂದು ರೈತರ ಖಾತೆಗೆ ಜಮಾ ಆಗಲು ಶುರುವಾಗುತ್ತದೆ.
ಇದುವರೆಗೆ ಈ ಯೋಜನೆಯ E-KYC ಮಾಡಿಸಿಕೊಂಡಿಲ್ಲ ಅಂತವರು ಈ ಕೂಡಲೇ E-KYCಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ನಂತರದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಇಲ್ಲವಾ ಎಂಬುದನ್ನು ಪರಿಶೀಲಿಸಿಕೊಳ್ಳಿ, ಇಲ್ಲದಿದ್ದಲ್ಲಿ ಈ ಕೂಡಲೇ ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ E-KYC ಯನ್ನು ನೀವು ಈ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಮಾಡಿಕೊಳ್ಳಬಹುದಾಗಿರುತ್ತದೆ. ಅಥವಾ ನಿಮ್ಮ ಹತ್ತಿರವಿರುವ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಈ ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ. ನೀವೇನಾದರೂ E-KYC ಮಾಡಿಸದೆ ಇದ್ದಲ್ಲಿ, ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದಲ್ಲಿ, ನಿಮ್ಮ ಖಾತೆಗೆ 18ನೇ ಕಂತಿನ ಹಣವು ಜವಾ ಆಗುವುದಿಲ್ಲ. ಆದ್ದರಿಂದ ಈ ಕೂಡಲೇ E-KYC ಮಾಡಿಸಿಕೊಳ್ಳಿ.