PM Kisan: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಎಲ್ಲಾ ಜನತೆಗೆ ತಿಳಿಸುವ ವಿಷಯವೇನೆಂದರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಹಣವು ಯಾವ ದಿನದಂದು ರೈತರ ಖಾತೆಗೆ ಬಂದು ಬೀಳಲಿದೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿರುತ್ತೇವೆ. ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣ ಮಾಹಿತಿ ಬೇಕಿದ್ದರೆ.
ಪ್ರಧಾನ ಮಂತ್ರಿ ಕಿಸಾನ್ (PM Kisan) ಸಮ್ಮಾನ್ ನಿಧಿ ಯೋಜನೆ:
ಈ ಯೋಜನೆಯನ್ನು ದೇಶದ ಪ್ರಧಾನ ಮಂತ್ರಿಗಳಾದಂತಹ ನರೇಂದ್ರ ಮೋದಿಯವರು ಜಾರಿಗೆ ತಂದಿರುತ್ತಾರೆ. ಒಂದು ವರ್ಷಕ್ಕೆ ₹6,000 ರೂಪಾಯಿ ಹಣವನ್ನು 3 ಕಂತಿನ ರೂಪದಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. 17ನೇ ಕಂತಿನವರೆಗೆ ರೈತರು ಹಣವನ್ನು ಪಡೆದುಕೊಂಡಿರುತ್ತಾರೆ. ಇದೀಗ ₹2,000 ಹಣವನ್ನು ಯಾವ ದಿನದಂದು ಮತ್ತೆ ಜಮಾ ಮಾಡಲಾಗುವುದು. 18ನೇ ಕಂತಿನ ಹಣ ಯಾವ ದಿನದಂದು ರೈತರ ಖಾತೆಗೆ ಬಂದು ಬೀಳಲಿದೆ.
ಬಹಳಷ್ಟು ಜನ ರೈತರು 18ನೇ ಕಂತಿನ ಹಣ ಯಾವಾಗ ಜಮಾ ಆಗಲೇ ಎಂದು ಕಾದು ಕುಳಿತಿದ್ದಾರೆ. ಅಂತವರಿಗೆ ಸರ್ಕಾರವು ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಯಾಕೆಂದರೆ, ಮುಂದಿನ ತಿಂಗಳು ಅಂದರೆ ಕೆಲವೇ ದಿನಗಳಲ್ಲಿ 18ನೇ ಕಂತಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಜಮಾ ಆಗಲಿದೆ ಎಂಬ ಮಾಹಿತಿಗಳು ತಿಳಿದು ಬಂದಿರುತ್ತವೆ.
ಪಿಎಂ ಕಿಸಾನ್ 18ನೇ ಕಂತಿನ ಹಣ ಯಾವಾಗ ಬಿಡುಗಡೆ:
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಹಣವು ಇದೇ ಮುಂದಿನ ತಿಂಗಳು ಅಂದರೆ ಅಕ್ಟೋಬರ್ 5 ನೇ ತಾರೀಕು 2024 ರಂದು ಈ ಯೋಜನೆಯ ಹಣವು ರೈತರ ಖಾತೆಗೆ ಜಮಾ ಆಗಲು ಶುರುವಾಗುತ್ತದೆ ಎಂದು ತಿಳಿಸಲಾಗಿದೆ.
ನೀವೇನಾದರೂ ಈ ಯೋಜನೆಯ ಹಣವನ್ನು ಪಡೆದುಕೊಳ್ಳಬೇಕೆಂದು ಬಯಸಿದರೆ ಅರ್ಜಿದಾರರು E-KYC ಯನ್ನು ಕಡ್ಡಾಯವಾಗಿ ಮಾಡಿಸಬೇಕು. ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಅಂದಾಗ ಮಾತ್ರ ನಿಮ್ಮ ಖಾತೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವು ಜಮಾ ಆಗಲಿದೆ.
ನಿಮ್ಮ ಹತ್ತಿರದ CSC ಕೇಂದ್ರಗಳಿಗೆ ಭೇಟಿ ನೀಡಿ ನೀವು E-KYC ಮಾಡಿಸಿಕೊಳ್ಳಬಹುದಾಗಿರುತ್ತದೆ ಅಥವಾ ನಿಮ್ಮ ಮೊಬೈಲ್ ನಲ್ಲಿಯೇ ಕೂಡ ನೀವು E-KYC ಯನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿರುತ್ತದೆ. ಮೇಲೆ ನೀಡಿರುವ ಜಾಲತಾಣವನ್ನು ಬಳಸಿಕೊಂಡು ನೀವು E-KYC ಮಾಡಿಕೊಳ್ಳಬಹುದು..