PM Vishwakarma: ನಮಸ್ಕಾರ ಎಲ್ಲರಿಗೂ, ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ನೀವು ₹15,000 ಹಣವನ್ನು ಉಚಿತವಾಗಿ ಪಡೆದುಕೊಳ್ಳುತ್ತೀರಾ ಹಾಗೂ ಮೂರು ಲಕ್ಷದವರೆಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಕೂಡ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ಮತ್ತು ನಿಮ್ಮ ವೃತ್ತಿ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸಲು ನಿಮಗೆ ಉಚಿತವಾಗಿ 5 ದಿನಗಳವರೆಗೆ ಈ ಯೋಜನೆ ಅಡಿಯಲ್ಲಿ ತರಬೇತಿಯನ್ನು ಕೂಡ ನೀಡಲಾಗುವುದು ಹಾಗೂ 500 ರೂಪಾಯಿ ದಿನಗೂಲಿಯನ್ನು ಸಹ ನೀಡಲಾಗುತ್ತದೆ. ಹಾಗಾದರೆ, ಯಾವುದು ಯೋಜನೆ ಎಂದು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ:
ಸ್ನೇಹಿತರೆ, ಈ ಯೋಜನೆಯು ಬಡವರಿಗೆ, ಮಹಿಳೆಯರಿಗೆ, ಹಾಗೂ ಹಿಂದುಳಿದ ವರ್ಗದವರಿಗೆ, ರೈತರಿಗೆ, ಅಂಗವಿಕಲರಿಗೆ ಉಪಯುಕ್ತವಾಗಲಿ ಎಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗುತ್ತದೆ ಈ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಕೇಂದ್ರ ಸರ್ಕಾರವು ನಿಮ್ಮ ವೃತ್ತಿ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸಲು ನೀಡಲಾಗುತ್ತದೆ.
ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಿದರೆ ₹15,000 ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಹಾಗೂ ಐದು ದಿನಗಳವರೆಗೆ ಉಚಿತವಾಗಿ ತರಬೇತಿಯನ್ನು ಕೂಡ ನೀಡಲಾಗುತ್ತದೆ. ಪ್ರತಿದಿನವೂ ಕೂಡ 500 ದಿನಗೂಲಿಯನ್ನು ಕೂಡ ನೀಡಲಾಗುತ್ತದೆ. ಮತ್ತು 3,00,000 ವರೆಗೆ ವೃತ್ತಿಪರ ಬಿಸಿನೆಸ್ ಹಾಗೂ ಇನ್ನಷ್ಟು ನೀವು ನಿಮ್ಮ ವೃತ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಕೂಡ ನೀಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
- ಬಟ್ಟೆ ತೊಳೆಯುವವರು
- ಹೂ ಮಾರುವವರು
- ದೋಣಿ ತಯಾರಿಸುವವರು
- ಮೀನುಗಾರರು
- ಕಲ್ಲುಕುಟಿಗರು
- ಅಕ್ಕಸಾಲಿಗರು
- ಟೈಲರಿಂಗ್ ಉದ್ಯೋಗ ಮಾಡುವವರು
- ಬುಟ್ಟಿನೇಯುವವರು
- ಶಿಲ್ಪಿಗರು
- ಬಡಿದರು
- ಕುಂಬಾರರು
- ಪಾದರಕ್ಷೆ ತಯಾರಿಸುವವರು
ಮೇಲೆ ನೀಡಿರುವ ವರ್ಗದ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಅರ್ಜಿದಾರರ ಆಧಾರ್ ಕಾರ್ಡ್
- ಅರ್ಜಿದಾರರ ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರಗಳು
- ಮೊಬೈಲ್ ನಂಬರ್
- ವೃತ್ತಿ ಪರವಾನಗಿ ಪ್ರಮಾಣ ಪತ್ರ
ಅರ್ಜಿ ಸಲ್ಲಿಸಲು ಅರ್ಹತೆಗಳು:
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಭಾರತೀಯ ನಾಗರೀಕನಾಗಿರಬೇಕು.
- ಬೇರೆ ನೀಡಿರುವ ಹಾಗೆ ಯಾವುದಾದರು ಒಂದು ವರ್ಗಕ್ಕೆ ಸೇರಿದವರಾಗಿರಬೇಕು.
- ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 59 ವರ್ಷ ಮೀರಿರಬಾರದು.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಯಾವುದೇ ರೀತಿಯ ಆದಾಯ ತೆರಿಗೆ ಮತ್ತು ಜಿಎಸ್ಟಿ ಪಾವತಿ ಮಾಡುತ್ತಿರಬಾರದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ ಕೆಳಗಡೆ ನೀಡಿರುವ ಅಧಿಕೃತ ಜಾಲತಾಣವನ್ನು ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನಂತರ ಅಗತ್ಯವಾಗಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್: ಅಪ್ಲೈ ಮಾಡಿ!
ಮೇಲೆ ನೀಡಿರುವ ಜಾಲತಾಣವನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ನೀವು ಇನ್ನಷ್ಟು ಸುಲಭವಾಗಿ ಅರ್ಜಿ ಸಲ್ಲಿಸಬಹುದು.