Ration Card: ಈ ಪಟ್ಟಿಯಲ್ಲಿ ಹೆಸರಿದ್ದವರ ರೇಷನ್ ಕಾರ್ಡು ರದ್ದು; ಸುಮಾರು 20 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಬಂದ್!

Ration Card: ನಮಸ್ಕಾರ ಎಲ್ಲರಿಗೂ, ಈ ಲೇಖನ ಮೂಲಕ ತಿಳಿಸುವುದೇನೆಂದರೆ, ಕೆಲವರು ಅನರ್ಹರಿದ್ದರು ಕೂಡ ಬಿಪಿಎಲ್ ಕಾರ್ಡುಗಳನ್ನು ಬಳಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅಂಥವರ ರೇಷನ್ ಕಾರ್ಡುಗಳನ್ನು ಪತ್ತೆ ಹಚ್ಚಿ ಅವರನ್ನು ಕೈಬಿಡುವ ಕೆಲಸ ನಡೆದಿದ್ದು ಅಥವಾ ರೇಷನ್ ಕಾರ್ಡುಗಳನ್ನು ಬಂದು ಮಾಡಲು ತೋರಿತವಾದ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಬಹುದಾಗಿದೆ. 

ಕೆಲವು ದಿನಗಳ ಹಿಂದೆ ವಿಧಾನಸೌಧದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿಗಳ ಕಾರ್ಯದರ್ಶಿಗಳು ಸಭೆ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯನವರು ತಿಳಿಸಿರುವ ವಿಷಯವೇನೆಂದರೆ, ಅನರ್ಹರಿರುವ ರೇಷನ್ ಕಾರ್ಡ್ ಗಳು ಅಥವಾ ಅನರ್ಹರಿರುವ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಬಳಸುತ್ತಿರುವಂತವರ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸುವಂತೆ ಎಚ್ಚರಿಕೆಯನ್ನು ನೀಡಿದ್ದಾರೆ. 

ಕರ್ನಾಟಕದಲ್ಲಿ ಸದ್ಯಕ್ಕೆ 80% ನಷ್ಟೂ ಬಿಪಿಎಲ್ ರೇಷನ್ ಕಾರ್ಡುಗಳನ್ನು ಹೊಂದಿರುವ ಜನರಿದ್ದಾರೆ ಹಾಗೂ 4.37 ಕೋಟಿ ಗಿಂತ ಹೆಚ್ಚು ಜನರು ಬಿಪಿಎಲ್ ರೇಷನ್ ಕಾರ್ಡುಗಳ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ಹೇಳಬಹುದು. ಸದ್ಯಕ್ಕೆ 2.95 ಲಕ್ಷ ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಕೆ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಅರ್ಜಿ ಸಲ್ಲಿಸಿರುವ ರೇಷನ್ ಕಾರ್ಡುಗಳ ವಿತರಣೆಯು ಇನ್ನೂ ಬಾಕಿ ಇದೆ. 

ರೇಷನ್ ಕಾರ್ಡ್ ಗಳಿಗೆ ಅಂದರೆ ಬಿಪಿಎಲ್ ರೇಷನ್ ಕಾರ್ಡುಗಳಿಗೆ ಅನರ್ಹರಿರುವವರು ಕೂಡ ಅರ್ಜಿ ಸಲ್ಲಿಸಿದ್ದಾರೆ ಯಾರು ರೇಷನ್ ಕಾರ್ಡುಗಳನ್ನು ಪಡೆಯಲು ಅರ್ಹರಿದ್ದಾರೆ ಅಥವಾ ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ಅರ್ಹರಿದ್ದಾರೆ ಎಂದು ಖಚಿತಪಡಿಸಿಕೊಂಡು ನಂತರ ರೇಷನ್ ಕಾರ್ಡ್ ವಿತರಣೆ ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ. 

ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಯಾರೆಲ್ಲ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಲು ಅನರ್ಹರಾಗಿದ್ದಾರೆ ಅಂತವರ ಪತ್ತೆ ಮಾಡಿ ಅವರ ರೇಷನ್ ಕಾರ್ಡ್ಗಳನ್ನು ರದ್ದು ಮಾಡಬೇಕು ಎಂಬ ಕಾರ್ಯಕ್ರಮವನ್ನು ಕೈಗೊಳ್ಳಲು ಸರ್ಕಾರವು ಮುಂದಾಗಿದೆ. ಈ ಕಾರಣದಿಂದಾಗಿ ಅನರ್ಹರಿರುವ ಬಿಪಿಎಲ್ ರೇಷನ್ ಕಾರ್ಡುಗಳನ್ನು ರದ್ದು ಮಾಡಬೇಕೆಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿರುತ್ತಾರೆ. 

ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಅನರ್ಹರಿದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಬಳಸುತ್ತಿರುವವರ ಸಂಖ್ಯೆ ಮಿತಿಮೀರಿದೆ ಎಂದು ಹೇಳಬಹುದಾಗಿದೆ. ಯಾರೆಲ್ಲ ರೇಷನ್ ಕಾರ್ಡ್ಗಳು ರದ್ದಾಗಲಿವೆ ಎಂಬ ಮಾಹಿತಿಯು ಈ ಕೆಳಗೆ ನೀಡಲಾಗಿರುತ್ತದೆ ನೋಡಿ. 

ಯಾರ ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದು? 

  • ಐಟಿ ರಿಟರ್ನ್ಸ್ ಮಾಡುತ್ತಿರುವವರ ಬಿಪಿಎಲ್ ರೇಷನ್ ಕಾರ್ಡು ರದ್ದು. 
  • ವೈಟ್ ಬೋರ್ಡ್ ಹೊಂದಿರುವ ನಾಲ್ಕು ಚಕ್ರದ ವಾಹನ ಇದ್ದರೆ ಬಿಪಿಎಲ್ ರೇಷನ್ ಕಾರ್ಡ್ ಬಂದ್. 
  • ಗ್ರಾಮೀಣ ಪ್ರದೇಶದಲ್ಲಿರುವ ಜನರು 3 ಹೆಕ್ಟರ್ ವಣಭೂಮಿ ಇಲ್ಲ ತತ್ಸಮಾನ ನೀರಾವರಿ ಭೂಮಿಯನ್ನು ಹೊಂದಿದ್ದರೆ ರೇಷನ್ ಕಾರ್ಡ್ ರದ್ದಾಗಲಿದೆ. 
  • ಪ್ರತಿ ತಿಂಗಳು 150 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಶಕ್ತಿಯನ್ನು ಬಳಸುತ್ತಿರುವವರ ಕುಟುಂಬದ ಬಿಪಿಎಲ್ ರೇಷನ್ ಕಾರ್ಡು ಬಂದ್ ಆಗುವ ಸಾಧ್ಯತೆ ಇದೆ. 
  • ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿದ್ದರೆ ಅಂತವರ ಬಿಪಿಎಲ್ ರೇಷನ್ ಕಾರ್ಡು ರದ್ದಾಗುವ ಸಾಧ್ಯತೆ ಇದೆ.
  • ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ಪಕ್ಕ ಮನೆಯನ್ನು ಹೊಂದಿದ್ದರೆ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. 

ಮೇಲೆ ಕೊಟ್ಟಿರುವ ಪಟ್ಟಿಯಲ್ಲಿರುವ ಅರ್ಹತೆಯನ್ನು ನೀವೇನಾದರೂ ಹೊಂದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇರುತ್ತದೆ. ಬಿಪಿಎಲ್ ರೇಷನ್ ಕಾರ್ಡು ಮೇಲೆ ಕೊಟ್ಟಿರುವಂತಹ ಪಟ್ಟಿಗಳಲ್ಲಿ ನೀವು ಯಾವುದೇ ರೀತಿಯ ಒಂದು ಗುಣವನ್ನು ಹೊಂದಿದ್ದರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುವ ಎಲ್ಲಾ ಲಕ್ಷಣಗಳು ಇವೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!