Ration Card Application : ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ಪ್ರಮುಖ ವಿಷಯವೆಂದರೆ, ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮತ್ತು ರೇಷನ್ ಕಾರ್ಡ್ ನಲ್ಲಿರುವಂತಹ ದೋಷಗಳನ್ನು ಸರಿಪಡಿಸಿಕೊಳ್ಳಲು ಹಲವಾರು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ವಿಚಾರದ ಕುರಿತಾಗಿ ಈ ಲೇಖನದಲ್ಲಿ ಚರ್ಚಿಸಲಾಗಿರುತ್ತದೆ. ಆದ ಕಾರಣ ಆಸಕ್ತಿ ಮತ್ತು ಅವಶ್ಯಕತೆ ಇರುವವರು ಲೇಖನವನ್ನು ಕೊನೆಯವರೆಗೂ ಓದಿ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಹಾಗೂ ತಿದ್ದುಪಡಿ ಮಾಡಿಸಲು ಕೂಡ ಇಂಥದ್ದೇ ದಿನಾಂಕ ಎಂದು ತಿಳಿಸಲಾಗುವುದಿಲ್ಲ. ಆದ್ದರಿಂದ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಹೊಸ ರೇಷನ್ ಕಾರ್ಡ್ ಅರ್ಜಿಗಳು ಯಾವಾಗ ಆರಂಭ?
ನೀವೇನಾದರೂ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ, ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕೊಡಲಾಗಿಲ್ಲ. ಏಕೆಂದರೆ ಹೊಸ ರೇಷನ್ ಕಾರ್ಡ್ ಗಳಿಗೆ ಹಲವಾರು ಅರ್ಜಿಗಳು ಈಗಾಗಲೇ ಸಲ್ಲಿಸಲಾಗಿದ್ದು ಅವುಗಳ ವಿಲೇವಾರಿ ಕಾರ್ಯಕ್ರಮವು ಪೆಂಡಿಂಗ್ ಇರುತ್ತದೆ. ಸುಮಾರು 2.95 ಲಕ್ಷಕ್ಕೂ ಹೆಚ್ಚು ಹೊಸ ರೇಷನ್ ಕಾರ್ಡ್ಗಳ ಅರ್ಜಿ ಸಲ್ಲಿಕೆ ಆಗಿವೆ ಎಂಬ ಮಾಹಿತಿಗಳು ತಿಳಿದು ಬಂದಿರುತ್ತವೆ.
ಹಾಗಾಗಿ ಸದ್ಯದಲ್ಲಿ ಹೊಸ ರೇಷನ್ ಕಾಡುಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಸೂಚನೆಗಳಿಲ್ಲ ಆದರೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿಯ ಕಾರ್ಯವನ್ನು ಮಾಡಿಕೊಳ್ಳಲು ಯಾವುದೇ ರೀತಿಯ ಮುನ್ಸೂಚನೆ ಇಲ್ಲದೆ ಅವಕಾಶವನ್ನು ಕೊಡಬಹುದಾಗಿರುತ್ತದೆ. ಹಾಗಾಗಿ ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಕಾದು ಕುಳಿತಿರುವಂತಹ ಅಭ್ಯರ್ಥಿಗಳು ನಮ್ಮ ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಬಹುದು.
ತಿಂಗಳಿನಲ್ಲಿ ಯಾವ ದಿನವೂ ಬೇಕಾದರೂ ಕೂಡ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕೊಡಬಹುದಾಗಿರುತ್ತದೆ. ಇದಕ್ಕೆ ಯಾವುದೇ ರೀತಿಯ ದಿನಾಂಕವನ್ನು ನಿಗದಿಪಡಿಸಲಾಗಿರುವುದಿಲ್ಲ. ಮತ್ತು ತಿದ್ದುಪಡಿಗೂ ಕೂಡ ಅಷ್ಟೇ ಯಾವುದೇ ದಿನಾಂಕ ಬೇಕಾದರೂ ತಿದ್ದುಪಡಿಗೆ ಅವಕಾಶವನ್ನು ಕೊಡಬಹುದು. ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ಎಂದು ಹಲವಾರು ಕಡೆ ಪ್ರಚಾರ ಮಾಡಲಾಗುತ್ತಿದೆ ಆದರೆ ಅವೆಲ್ಲ ಕೇವಲ ವದಂತಿಗಳು ಎಂದು ಹೇಳಬಹುದು.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಎಲ್ಲಾ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಬಯೋಮೆಟ್ರಿಕ್
- 6 ವರ್ಷದೊಳಗಿನ ಮಕ್ಕಳಿದ್ದಲ್ಲಿ ಜನನ ಪ್ರಮಾಣ ಪತ್ರ.
ಈ ಮೇಲೆ ನೀಡಿರುವ ದಾಖಲೆಗಳನ್ನು ನೀವು ತೆಗೆದುಕೊಂಡು ಇಟ್ಟಿರಿ ಯಾಕೆಂದರೆ ಯಾವಾಗ ಬೇಕಾದರೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕೊಡಬಹುದಾಗಿರುತ್ತದೆ.
ಆದ್ದರಿಂದ ನೀವು ನಿಮ್ಮ ದಾಖಲೆಗಳನ್ನು ತಯಾರಿಟ್ಟುಕೊಂಡ ತಕ್ಷಣ ಯಾವ ದಿನದಂದು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡುತ್ತಾರೋ ಆ ದಿನದಂದು ಈ ದಾಖಲೆಗಳನ್ನು ಬಳಸಿಕೊಂಡು ಹೊಸ ರೇಷನ್ ಕಾರ್ಡ್ ಗಳಿಗೆ ನಿಮ್ಮ ಹತ್ತಿರವಿರುವ ಗ್ರಾಮಒನ್ ಕರ್ನಾಟಕಒನ್ ಬೆಂಗಳೂರುಒನ್ ಇಂತಹ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.