Ration Card Cancel: ನಮಸ್ಕಾರ ಎಲ್ಲರಿಗೂ, ರಾಜ್ಯದ ಜನತೆಗೆ ತಿಳಿಸುವ ಪ್ರಮುಖ ವಿಷಯವೇನೆಂದರೆ, ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಒಂದು ಪ್ರಮುಖ ದಾಖಲೆ ಹೇಗೂ ರೇಷನ್ ಕಾರ್ಡ್ ಒಂದು ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದು ಎಂದು ಹೇಳಬಹುದು. ಯಾಕೆಂದರೆ ಸರ್ಕಾರದ ವತಿಯಿಂದ ಲಭ್ಯವಿರುವ ಯೋಜನೆಗಳ ಲಾಭ ಹಾಗೂ ಇನ್ನಿತರ ಸರ್ಕಾರ ನೀಡುವಂತಹ ಸೌಲಭ್ಯಗಳನ್ನು ಬಳಸಿಕೊಳ್ಳಲು ರೇಷನ್ ಕಾರ್ಡ್ ಒಂದು ಅತ್ಯಂತ ಪ್ರಮುಖ ದಾಖಲೆಯಾಗಿರುತ್ತದೆ.
ಆದರೆ ಕೆಲವೊಂದಿಷ್ಟು ಜನ ಅಕ್ರಮವಾಗಿ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ಗಳನ್ನು ಬಳಸುತ್ತಿದ್ದಾರೆ. ಅಂಥವರನ್ನು ಗುರುತಿಸಿ ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಕೆಲಸವನ್ನು ಸರ್ಕಾರವು ಕೈಗೊಂಡಿರುತ್ತದೆ. ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷಕ್ಕೂ ಹೆಚ್ಚು ಅನರ್ಹ ರೇಶನ್ ಕಾಡುಗಳ ಪತ್ತೆ ಆಗಿರುವುದು ಒಂದು ಅಚ್ಚರಿ ಪಡುವ ಸಂಗತಿ ಎಂದು ಹೇಳಬಹುದು.
ಯಾರ ರೇಷನ್ ಕಾರ್ಡುಗಳನ್ನು ಗುರುತಿಸಿ ಅಂತವರ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ಗಳನ್ನು ಹೊಂದಿದ್ದಲ್ಲಿ ರದ್ದು ಮಾಡಲಾಗುವುದು ಎಂದು ಸರ್ಕಾರವು ತಿಳಿಸಿರುತ್ತದೆ. ಅಂತವರ ಪಟ್ಟಿಯನ್ನು ಈ ಕೆಳಗಡೆ ನೀಡಲಾಗಿರುತ್ತದೆ. ಈ ಕೆಳಗೆ ನೀಡಿರುವಂತಹ ಅರ್ಹತಾ ಮಾನದಂಡಗಳನ್ನು ಹೊಂದಿಲ್ಲದೆ ಇರುವವರನ್ನು ರೇಷನ್ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂದು ತಿಳಿದು ಬಂದಿರುತ್ತದೆ.
ಯಾರ ರೇಷನ್ ಕಾರ್ಡ್ ರದ್ದಾಗಲಿವೆ:
ಕಾರು ಹೊಂದಿದವರು, ತೆರಿಗೆ ಪಾವತಿ ಮಾಡುವವರು, 100cc ಮೇಲ್ಪಟ್ಟ ದ್ವಿಚಕ್ರ ವಾಹನದ ಮಾಲೀಕರ, 7.5 ಎಕರೆ ಭೂಮಿಗಿಂತ ಮೇಲ್ಪಟ್ಟು ಆಸ್ತಿ ಹೊಂದಿದವರ, ಕೈಗಾರಿಕೋದ್ಯಮ ನಡೆಸುವವರ, ಗುತ್ತಿಗೆದಾರರ, ಕಾಲೇಜು ನೌಕರರ, ಅಂತರಾಷ್ಟ್ರೀಯ ಕಂಪನಿಗಳ ಅಥವಾ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಇರುವಂತಹ ರೇಷನ್ ಕಾರ್ಡ್ ರದ್ದಾಗಲಿವೆ ಎಂದು ಮಾಹಿತಿ ತಿಳಿದು ಬಂದಿರುತ್ತದೆ. ಆಹಾರ ಇಲಾಖೆಯು ಪಟ್ಟಿ ಮಾಡಿರುವಂತಹ ಮಾನದಂಡಗಳ ಪಟ್ಟಿಯಲ್ಲಿ ಅರ್ಹತೆ ಹೊಂದಿಲ್ಲದವರನ್ನು ಬಿಪಿಎಲ್ ಅಥವಾ ಅಂತ್ಯವಾದ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುವುದು ಎಂದು ಮಾಹಿತಿಗಳು ತಿಳಿದು ಬಂದಿದೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತದೆ. ಆದರೆ ಬಡತನ ರೇಖೆಗಿಂತ ಮೇಲಿರುವವರು ಕೂಡ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ಗಳನ್ನು ಬಳಸುತ್ತಿರುವ ಅನರ್ಹರು ಬಹಳಷ್ಟು ಜನ ಇದ್ದಾರೆ. ಸುಮಾರು 22 ಲಕ್ಷಕ್ಕೂ ಹೆಚ್ಚು ಜನರು ಅನರ್ಹರು ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡುಗಳನ್ನು ಬಳಸುತ್ತಿದ್ದಾರೆ. ಅಂತವರ ರೇಷನ್ ಕಾರ್ಡ್ಗಳನ್ನು ಪತ್ತೆ ಮಾಡಿ ಅವುಗಳನ್ನು ರದ್ದುಗೊಳಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.
ಅಕ್ರಮವಾಗಿ ರೇಷನ್ ಕಾರ್ಡ್ಗಳನ್ನು ಪಡೆದುಕೊಂಡವರ ರೇಷನ್ ಕಾರ್ಡ್ ಗಳು ರದ್ದಾಗುವುದು ಹೊಸ ವಿಷಯವೇನಲ್ಲ. ಹಲವಾರು ಬಾರಿ ಸರ್ಕಾರವು ಈ ರೀತಿಯಾಗಿ ಆದೇಶವನ್ನು ನೀಡಿತ್ತು. ಆದರೆ ಈ ಬಾರಿ ಹೆಚ್ಚು ಪರಿಣಾಮಕಾರಿಯಾಗಿ ಅಕ್ರಮವಾಗಿ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ರದ್ದುಗೊಳಿಸುವ ಕಾರ್ಯಕ್ರಮ ಜರಗಲಿದೆ ಎಂಬ ಮಾಹಿತಿಗಳು ಕೇಳಿಬಂದಿದೆ.