Ration Card: ನಮಸ್ಕಾರ ಎಲ್ಲರಿಗೂ, ರಾಜ್ಯದ ಜನತೆಗೆ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ರೇಷನ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರೂ ಕೂಡ ಈ ಕೆಲಸವನ್ನು ನೀವು ಕಡ್ಡಾಯವಾಗಿ ಮಾಡಬೇಕು. ನಿಮಗೇನಾದರೂ ಮುಂದಿನ ತಿಂಗಳಿನಿಂದ ರೇಷನ್ ಪಡೆದುಕೊಳ್ಳಬೇಕಾದರೆ ಈ ಕೆಲಸವನ್ನು ನೀವು ಕೂಡಲೇ ಮಾಡಬೇಕಾಗುತ್ತದೆ. ಹಾಗಾದರೆ ಯಾವುದು ಈ ಕೆಲಸ ಎಂಬುದನ್ನು ತಿಳಿದುಕೊಳ್ಳಲು ನೀವು ಲೇಖನವನ್ನು ಕೊನೆಯವರೆಗೂ ಓದಬೇಕಾಗುತ್ತದೆ.
ಹೌದು ಸ್ನೇಹಿತರೆ, E-KYC ಮಾಡಿಸುವುದಾಗಿ ಆಹಾರ ಇಲಾಖೆಯು ಮಾಹಿತಿ ನೀಡಿದ್ದು, ಈ ಕೆಲಸವನ್ನು ಎಲ್ಲ ಜಿಲ್ಲೆಯವರು ಕೂಡ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಗಿರುತ್ತದೆ. ರೇಷನ್ ಕಾರ್ಡಿನಲ್ಲಿರುವಂತಹ ಎಲ್ಲಾ ಸದಸ್ಯರ E-KYC ಮಾಡಿಸುವುದು ಕಡ್ಡಾಯವಾಗಿದೆ. ಎಂದು ರೇಷನ್ ಕಾರ್ಡ್ದಾರರಿಗೆ ತಿಳಿಸಲಾಗಿರುತ್ತದೆ. ಈಗಲೇ E-KYC ಮಾಡಿಸಿಕೊಳ್ಳಿ. ಇಲ್ಲವಾದಲ್ಲಿ ರೇಷನ್ ಕಾರ್ಡ್ ತೆಗಿತಗೊಳಿಸುವ ಎಚ್ಚರವನ್ನು ಸರ್ಕಾರವು ನೀಡಿರುತ್ತದೆ.
ರೇಷನ್ ಕಾರ್ಡ್ E-KYC ಯನ್ನು ಮಾಡಿಸಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿರುತ್ತದೆ. ಸೆಪ್ಟೆಂಬರ್ 30ರ ಒಳಗಾಗಿ ಗ್ರಾಹಕರು ಬೇಕಾಗುವ ದಾಖಲೆಗಳನ್ನು ತೆಗೆದುಕೊಂಡು ಸಂಬಂಧ ಪಟ್ಟಂತಹ ನ್ಯಾಯಬೆಲೆ ಅಂಗಡಿಗೆ ಹೋಗಿ ಉಚಿತವಾಗಿ ಮಾಡಿಸಿಕೊಳ್ಳಬಹುದಾಗಿರುತ್ತದೆ. ಈ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಮಾಡಿಕೊಳ್ಳಲಾಗುತ್ತದೆ. ಆದ್ದರಿಂದ ಕಡ್ಡಾಯವಾಗಿ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ E-KYCಯನ್ನು ಮಾಡಿಸಿಕೊಳ್ಳಿ.
ರೇಷನ್ ಕಾರ್ಡ್ E-KYC ಮಾಡಿಸಲು ಬೇಕಾಗುವ ದಾಖಲೆಗಳು:
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
- ಕುಟುಂಬದ ಯಜಮಾನರ ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
- ಕುಟುಂಬದ ಯಜಮಾನರ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ವಿವರಗಳು
ಈ ಮೇಲಿನ ದಾಖಲೆಗಳನ್ನು ತೆಗೆದುಕೊಂಡು ನೀವು E-KYC ಯನ್ನು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಮಾಡಿಸಿಕೊಳ್ಳಬಹುದಾಗಿರುತ್ತದೆ. ಹಾಗಾಗಿ ನಿಮಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿರುತ್ತದೆ. ಆದ ಕಾರಣ ಅದರ ಒಳಗಾಗಿ ನೀವು E-KYC ಯನ್ನು ಕಡ್ಡಾಯವಾಗಿ ಮಾಡಿಸಿ.