Santoor Scholarship Programme 2024-25: ನಮಸ್ಕಾರ ರಾಜ್ಯದ ಜನತೆ, ಈ ಲೇಖನದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲು ಬಯಸುವ ವಿಷಯವೇನೆಂದರೆ ದ್ವಿತೀಯ ಪಿಯುಸಿ ಮುಗಿಸಿ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಸಂತೂರ್ ಸ್ಕಾಲರ್ಶಿಪ್ ಪ್ರೋಗ್ರಾಮ್ ವತಿಯಿಂದ ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿ, 24,000 ಹಣವನ್ನು ಪಡೆಯುವ ಅವಕಾಶವನ್ನು ಪಡೆಯಬಹುದಾಗಿರುತ್ತದೆ.
ಸಂತೂರ್ ಸ್ಕಾಲರ್ಶಿಪ್ ಪ್ರೋಗ್ರಾಮ್:
ಈ ಸ್ಕಾಲರ್ ಶಿಪ್ ಯೋಜನೆಯ ಅಡಿಯಲ್ಲಿ 12ನೇ ತರಗತಿ ಉತ್ತೀರ್ಣರಾಗಿ ನಂತರ ಉನ್ನತ ಶಿಕ್ಷಣ ಪಡೆಯಲು ಬಯಸಿರುವಂತಹ ಹಿಂದುಳಿದ ವರ್ಗ ಹಾಗೂ ಬಡ ಮಹಿಳಾ ವಿದ್ಯಾರ್ಥಿಗಳಿಗೆ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಈ ಸ್ಕಾಲರ್ಶಿಪ್ ಯೋಜನೆಯನ್ನು ಸ್ಕಾಲರ್ಶಿಪ್ ನ ಸಹಾಯಧನವನ್ನು ನೀಡಲು ಪ್ರಾರಂಭಿಸಲಾಯಿತು ಎಂದು ಹೇಳಬಹುದಾಗಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಹತೆಗಳು:
- ಈ ವಿದ್ಯಾರ್ಥಿ ವೇತನಕ್ಕೆ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ & ಛತ್ತೀಸ್ಗಡ ರಾಜ್ಯದ ಹಿಂದುಳಿದ ವಿದ್ಯಾರ್ಥಿಗಳಿಗೆ ಅವಕಾಶ.
- ಈ ಸ್ಕಾಲರ್ ಶಿಪ್ ಗೆ ವಿದ್ಯಾರ್ಥಿನಿಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನಿಯು 10ನೇ ತರಗತಿ ಸರ್ಕಾರಿ ಶಾಲೆಯಲ್ಲಿ ಉತ್ತೀರ್ಣರಾಗಿರಬೇಕು.
- ಪ್ರಸ್ತುತ 2024-25 ನೇ ಸಾಲಿನ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
ಬೇಕಾಗುವ ದಾಖಲೆಗಳು:
- ವಿದ್ಯಾರ್ಥಿನಿಯ ಆಧಾರ್ ಕಾರ್ಡ್
- ವಿದ್ಯಾರ್ಥಿನಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಪದವಿ ಕಾಲೇಜಿನ ಐಡಿ ಕಾರ್ಡ್
- PUC ಮತ್ತು SSLC ಅಂಕಪಟ್ಟಿಗಳು
- ಬ್ಯಾಂಕ್ ಪಾಸ್ ಬುಕ್ ವಿವರಗಳು
ಅರ್ಜಿ ಸಲ್ಲಿಸುವುದು ಹೇಗೆ?
ನೀವೇನಾದರೂ ಈ ಸಂತೂರ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ 24,000 ವರೆಗೆ ಹಣವನ್ನು ಪಡೆದುಕೊಳ್ಳಬೇಕೆಂದು ಬಯಸಿದರೆ ಈ ಕೆಳಗಡೆ ನೀಡಿರುವ ಜಾಲತಾಣವನ್ನು ಬಳಸಿಕೊಂಡು ಈ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
Application Link | Apply Now |
ಮೇಲೆ ನೀಡಿರುವಂತಹ ಜಾಲತಾಣವನ್ನು ಬಳಸಿಕೊಂಡು ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಇದೇ ತರಹದ ಹೆಚ್ಚಿನ ಸುದ್ದಿಗಳಿಗಾಗಿ ನೀವು ನಮ್ಮ ಜಾಲತಾಣದ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗುವ ಮೂಲಕ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದಾಗಿರುತ್ತದೆ.