SBI Jobs: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಳು ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಆಸಕ್ತಿಯುಳ್ಳಂತಹ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಅಂದಾಗ ಮಾತ್ರ ಅರ್ಜಿ ಸಲ್ಲಿಸಲು ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಈ ಲೇಖನದಲ್ಲಿ ನಿಮಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಬಗ್ಗೆ ವಿವರಣೆಯನ್ನು ನೀಡಲಾಗಿರುತ್ತದೆ. ಹಾಗೂ ಇದೇ ತರಹದ ಹೆಚ್ಚಿನ ಸುದ್ದಿಗಳಿಗಾಗಿ ಮತ್ತು ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ವಿವರಗಳನ್ನು ತಿಳಿದುಕೊಳ್ಳಲು ನಮ್ಮ ಜಾಲತಾಣದ ಚಂದದಾರರಾಗಿರಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ:
ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಬುದು ಎಷ್ಟು ಪ್ರಸಿದ್ಧಿ ಪಡೆದಿರುವ ಬ್ಯಾಂಕ್ ಎಂಬುದು ನಿಮಗೆಲ್ಲ ಗೊತ್ತಿದೆ. ಈ ಬ್ಯಾಂಕಿನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಆರಂಭವಾಗಿದೆ. ಆಸಕ್ತಿ ಮತ್ತು ಅರ್ಹತೆಗಳಂತಹ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಹುದ್ದೆಗಳ ವಿವರವನ್ನು ನೋಡಿಕೊಳ್ಳಿ.
ಖಾಲಿ ಇರುವ ಹುದ್ದೆಗಳ ವಿವರ:
- ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಖಾಲಿ ಇರುವ ಹುದ್ದೆಗಳು: 58 ಹುದ್ದೆಗಳು
- ಹುದ್ದೆಯ ಹೆಸರು: ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ
- ಉದ್ಯೋಗ ಸ್ಥಳ: ಭಾರತ ದೇಶದಾದ್ಯಂತ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24/09/2024
ಅರ್ಜಿ ಸಲ್ಲಿಸಲು ಅರ್ಹತೆಗಳು:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರಳಿಸಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು 21 ವರ್ಷ ಮೇಲ್ಪಟ್ಟಿರಬೇಕು ಹಾಗೂ 45 ವರ್ಷವನ್ನು ಮೇಲಿರಬಾರದು ಎಂದು ತಿಳಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಐಟಿಐ, ಬಿ.ಇ./ ಬಿ.ಟೆಕ್./ ಎಂ.ಸಿ.ಎ. ಇವುಗಳಲ್ಲಿ ಯಾವುದಾದರೂ ಒಂದು ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಸೆಪ್ಟೆಂಬರ್ 24 ನೇ ತಾರೀಖಿನ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರನು ಕೆಳಗಡೆ ನೀಡಲಾಗಿರುವಂತಹ ವರ್ಗಗಳಿಗೆ ಅನುಸಾರವಾಗಿ ಅರ್ಜಿ ಶುಲ್ಕವನ್ನು ಭರಿಸಬೇಕು.
- ಎಸ್.ಸಿ./ಎಸ್.ಟಿ. ಹಾಗೂ ಪಿಡಬ್ಲ್ಯೂಡಿ – ಅರ್ಜಿ ಶುಲ್ಕ ಇರುವುದಿಲ್ಲ.
- ಸಾಮಾನ್ಯ ವರ್ಗ ಮತ್ತು ಒಬಿಸಿ – ₹750/-
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ನೀವೇನಾದರೂ ರಾಜ್ಯ ಸಲ್ಲಿಸಲು ಬಯಸಿದರೆ ನಿಮ್ಮ ಹತ್ತಿರವಿರುವ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹಾಗೂ ಹೆಚ್ಚಿನ ವಿವರಗಳಿಗಾಗಿ ಕೆಳಗಡೆ ನೀಡಿರುವ ಜಾಲತಾಣವನ್ನು ನೀವು ಭೇಟಿ ನೀಡಬಹುದಾಗಿರುತ್ತದೆ. ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕನ್ನು ಈ ಕೆಳಗಡೆ ನೀಡಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್: ಅಪ್ಲೈ ಮಾಡಿ!
ಮೇಲೆ ಕೊಟ್ಟಿರುವ ಜಾಲತಾಣವನ್ನು ಬಳಸಿಕೊಂಡು ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.