SBIF Asha Scholarship: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ರಾಜ್ಯದ ಜನತೆಗೆ ತಿಳಿಸುವ ವಿಷಯವೇನೆಂದರೆ, ನಿಮಗೆಲ್ಲ ಗೊತ್ತಿರುವ ಹಾಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ ನ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಈ ವಿದ್ಯಾರ್ಥಿ ವೇತನವನ್ನು 6 ರಿಂದ 12ನೇ ತರಗತಿ ಮಕ್ಕಳು ಅರ್ಜಿ ಸಲ್ಲಿಸಿ ತಮ್ಮ ಉನ್ನತ ಶಿಕ್ಷಣಕ್ಕಾಗಿ ಈ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿರುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳು ಮತ್ತು ದಾಖಲೆಗಳು ಬೇಕಾಗುತ್ತವೆ ಎಂಬುದರ ಬಗ್ಗೆ ಸಂಪೂರ್ಣವಾದ ನಿಮ್ಮ ಪ್ರಶ್ನೆಗಳಿಗೆ ಈ ಲೇಖನದಲ್ಲಿ ವಿವರವಾಗಿ ಉತ್ತರಿಸಲಾಗಿರುತ್ತದೆ ನೋಡಿ.
ವಿದ್ಯಾರ್ಥಿ ವೇತನದ ಪ್ರಮುಖ ಅಂಶಗಳು:
ವಿದ್ಯಾರ್ಥಿ ವೇತನದ ಹೆಸರು | ಶಾಲಾ ಕಾಲೇಜು ವಿದ್ಯಾರ್ಥಿಗಳ SBIF ಆಶಾ ವಿದ್ಯಾರ್ಥಿ ವೇತನ |
ಸಂಸ್ಥೆ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ |
ಯಾರು ಅರ್ಜಿ ಸಲ್ಲಿಸಬಹುದು? | 6 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಅರ್ಹರು. |
ವಿದ್ಯಾರ್ಥಿ ವೇತನದ ಮೊತ್ತ | ₹15,000/- |
ಅರ್ಜಿ ಸಲ್ಲಿಸಲು ಕೊನೆಯ ದಿನ | 01/10/2024 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಈ ವಿದ್ಯಾರ್ಥಿ ವೇತನಕ್ಕೆ ಅರ್ಹತೆಗಳು:
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯು ಭಾರತೀಯ ನಿವಾಸಿಯಾಗಿರಬೇಕು.
- 2024-25ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ 6 ರಿಂದ 12 ನೇ ತರಗತಿ ವ್ಯಾಸಂಗ ಮಾಡುತ್ತಿರಬೇಕು.
- ಯಾವುದೇ ವರ್ಗಕ್ಕೆ ಸೇರಿರುವಂತಹ ವಿದ್ಯಾರ್ಥಿಗಳಾದರೂ ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾದ ಅವಕಾಶವನ್ನು ಕೊಡಲಾಗಿರುತ್ತದೆ.
- ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು.
- ವಿದ್ಯಾರ್ಥಿನಿಯರಿಗೆ 50%ರಷ್ಟು ವಿದ್ಯಾರ್ಥಿ ವೇತನವನ್ನು ಕಾಯ್ದಿರಿಸಲಾಗಿರುತ್ತದೆ. ಇದರರ್ಥ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಆದ್ಯತೆ ಇರುತ್ತದೆ.
ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಹಿಂದಿನ ವರ್ಷದ ಅಂಕಪಟ್ಟಿ
- ಶಾಲೆ ಅಥವಾ ಕಾಲೇಜಿನ ಶುಲ್ಕ ತುಂಬಿದ ರಶೀದಿ
- ಸ್ಟಡಿ ಸರ್ಟಿಫಿಕೇಟ್
- ಬ್ಯಾಂಕ್ ಪಾಸ್ ಬುಕ್ ವಿವರಗಳು
- ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ
- ಪಾಸ್ಪೋರ್ಟ್ ಅಳಿತೆಯ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈ ಕೆಳಗೆ ನೀಡಿರುವ ಜಾಲತಾಣವನ್ನು ಬಳಸಿಕೊಂಡು ನೀವು ಕೇಳಲಾಗುವ ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿ ಹಾಗೂ ಅಲ್ಲಿ ಕೇಳಲಾಗುವ ನಿಮ್ಮ ಮಾಹಿತಿಗಳನ್ನು ಸರಿಯಾಗಿ ತುಂಬುವ ಮೂಲಕ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
Application Link | Apply Now |
ಮೇಲೆ ನೀಡಿರುವಂತಹ ಜಾಲತಾಣವನ್ನು ಬಳಸಿಕೊಂಡು ನೀವು ಈ ವಿದ್ಯಾರ್ಥಿ ವೇತನಕ್ಕೆ ಅಗತ್ಯ ದಾಖಲೆಗಳನ್ನು ಮತ್ತು ನಿಮ್ಮ ಸರಿಯಾದ ಮಾಹಿತಿಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿರುತ್ತದೆ.