Sensodyne Scholarship Scholarship: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಸೆನ್ಸೋಡೈನ್ ಕಂಪನಿಯು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಉನ್ನತವಾದ ಶಿಕ್ಷಣವನ್ನು ಮುಂದುವರಿಸಲು ಸಹಾಯಕವಾಗುವ ರೀತಿಯಲ್ಲಿ 75,000 ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಅರ್ಹ ಮತ್ತು ಆಸಕ್ತಿ ಇರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಸೆನ್ಸೋಡೈನ್ ಸ್ಕಾಲರ್ಶಿಪ್: (Sensodyne Scholarship)
ಈ ವಿದ್ಯಾರ್ಥಿ ವೇತನವನ್ನು ಸೆನ್ಸೋಡೈನ್ ಫೌಂಡೇಶನ್ ವತಿಯಿಂದ ನೀಡಲಾಗುತ್ತಿದ್ದು, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಪ್ರತಿ ವಿದ್ಯಾರ್ಥಿಗೆ ಕೂಡ 75,000 ವಿದ್ಯಾರ್ಥಿ ವೇತನವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳು ಇರಬೇಕು ಹಾಗೂ ಬೇಕಾಗುವ ದಾಖಲೆಗಳೇನು ಎಂಬುದನ್ನು ಈ ಕೆಳಗಿನ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಕಾಲೇಜಿನ ಪ್ರವೇಶ ಪ್ರಮಾಣ ಪತ್ರ
- 12ನೇ ತರಗತಿ ಅಂಕಪಟ್ಟಿ
- ಕಾಲೇಜು ಶುಲ್ಕ ತುಂಬಿದ ರಶೀದಿ
ಅರ್ಜಿ ಸಲ್ಲಿಸಲು ಅರ್ಹತೆಗಳು:
ನೀವೇನಾದರೂ ಈ ಸೆನ್ಸೋಡೈನ್ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಬಯಸಿದರೆ BDS ಇಲ್ಲವೇ MDS ಕೋರ್ಸ್ ನಲ್ಲಿ ಅಧ್ಯಯನ ಮಾಡುತ್ತಿರಬೇಕು ಎಂದು ತಿಳಿಸಲಾಗಿದೆ.
ಪ್ರಮುಖವಾಗಿ ಹೇಳುವುದಾದರೆ ಅರ್ಜಿ ಸಲ್ಲಿಸಲು ಬಯಸುವಂಥವರು 12ನೇ ತರಗತಿಯಲ್ಲಿ ಕನಿಷ್ಠ 60% ಗಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು ಎಂದು ತಿಳಿಸಲಾಗಿದೆ.
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷವನ್ನು ಮೀರಿರಬಾರದು ಎಂದು ತಿಳಿಸಲಾಗಿದೆ. ಅಂದಾಗ ಮಾತ್ರ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ?
ನೀವೇನಾದರೂ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ 75,000 ವಿದ್ಯಾರ್ಥಿ ವೇತನವನ್ನು ಪಡೆಯಲು ಅವಕಾಶವನ್ನು ಪಡೆಯಬೇಕೆಂದು ಬಯಸಿದರೆ, ಈ ಕೆಳಗಡೆ ನೀಡಿರುವಂತಹ ಜಾಲತಾಣವನ್ನು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
Application Link | Apply Now |
Last Date | 30/10/2024 |
ಮೇಲೆ ನೀಡಿರುವಂತಹ ಜಾಲತಾಣವನ್ನು ಬಳಸಿಕೊಂಡು ಸೆನ್ಸೋಡೈನ್ ಸ್ಕಾಲರ್ಶಿಪ್ ಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ 75,000ವರೆಗಿನ ವಿದ್ಯಾರ್ಥಿ ವೇತನವನ್ನು ಪಡೆಯಲು ಅವಕಾಶವನ್ನು ಪಡೆಯಬಹುದಾಗಿದೆ.